ಸಿ.ಕೆ ನಾಯ್ಡು ಟ್ರೋಫಿ: ಕರ್ನಾಟಕ ತಂಡಕ್ಕೆ ನಿಕಿನ್ ಜೋಸ್ ನಾಯಕ

0
Nikin Jose. PC: Facebook

ಬೆಂಗಳೂರು, ಅಕ್ಟೋಬರ್ 30: ನವೆಂಬರ್ 2ರಿಂದ 5ರವರೆಗೆ ಶಿವಮೊಗ್ಗದಲ್ಲಿ ನಡೆಯಲಿರುವ ಸಿ.ಕೆ ನಾಯ್ಡು ಟ್ರೋಫಿ ಟೂರ್ನಿಯ ಜಾರ್ಖಂಡ್ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ಎ ತಂಡವನ್ನು ಪ್ರಕಟಿಸಲಾಗಿದ್ದು, ನಿಕಿನ್ ಜೋಸ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಶ್ರೀಜಿತ್ ಕೆ.ಎಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದ 19 ವರ್ಷದೊಳಗಿನವರ ತಂಡದ ನಾಯಕತ್ವ ವಹಿಸಿದ್ದ ಯುವ ಆಲ್ರೌಂಡರ್ ಶುಭಾಂಗ್ ಹೆಗ್ಡೆ ಮತ್ತು ಭಾರತ 19 ವರ್ಷದೊಳಗಿನವರ ತಂಡವನ್ನು ಪ್ರತಿನಿಧಿಸಿರುವ ಎಡಗೈ ಬ್ಯಾಟ್ಸ್ ಮನ್ ದೇವದತ್ ಪಡಿಕಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕ ರಣಜಿ ತಂಡದ ಸಂಭಾವ್ಯರ ಪಟ್ಟಿಯಲ್ಲಿರುವ ವಿಕೆಟ್ ಕೀಪರ್ ಗಳಾದ ಶರಬ್ ಬಿ.ಆರ್ ಮತ್ತು ಶರತ್ ಶ್ರೀನಿವಾಸ್ ಕೂಡ ತಂಡದಲ್ಲಿದ್ದಾರೆ.

ಕರ್ನಾಟಕ ಎ ತಂಡ: ನಿಕಿನ್ ಜೋಸ್(ನಾಯಕ), ಶ್ರೀಜಿತ್ ಕೆ.ಎಲ್(ಉಪನಾಯಕ), ದೇವದತ್ ಪಡಿಕಲ್, ಶುಭಾಂಗ್ ಹೆಗ್ಡೆ, ಶರತ್ ಬಿ.ಆರ್(ವಿಕೆಟ್ ಕೀಪರ್), ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ಸುಜಿತ್ ಎನ್.ಗೌಡ, ಅಂಕಿತ್ ಉಡುಪ, ಆದಿತ್ಯ ಸೋಮಣ್ಣ, ಅವಿನಾಶ್ ಡಿ., ದರ್ಶನ್ ಎಂ.ಬಿ., ವೈಶಾಖ್ ವಿಜಯ್ ಕುಮಾರ್, ಕಿಶನ್ ಎಸ್. ಬೆಂಡೆರೆ, ಸಂಕಲ್ಪ್ ಶೈಲೇಂದ್ರ, ಕುಶಾಲ್ ಪ್ರಮೇಶ್. ಕೋಚ್: ಎನ್.ಸಿ ಅಯ್ಯಪ್ಪ, ಸಹಾಯಕ ಕೋಚ್: ಎಸ್.ಎನ್ ಅಮಿತ್, ಫಿಸಿಯೊ: ಗೌತಮ್, ಟ್ರೈನರ್: ಇರ್ಫಾನುಲ್ಲಾ ಖಾನ್, ವೀಡಿಯೊ ವಿಶ್ಲೇಷಕ: ಪಿ.ರಾಜೀವ್, ಮ್ಯಾನೇಜರ್: ಕೆ.ಮುರಳೀಧರ್.

LEAVE A REPLY

Please enter your comment!
Please enter your name here

three × two =