ಸೂಪರ್ ಡಿವಿಜನ್ ಲೀಗ್: ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಅನಾವರಣ

0
Sharath Kamath and the team officials during the launch of the Bengaluru Dream United FC in Bengaluru on Monday.
ಬೆಂಗಳೂರು, ಸೆಪ್ಟೆಂಬರ್ 3: ಸೂಕ್ತ ಸೌಲಭ್ಯಗಳೊಂದಿಗೆ ಸರಿಯಾದ ರೀತಿಯಲ್ಲಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಟ್ಟು ಫುಟ್ಬಾಲ್ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದೊಂದಿಗೆ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ (ಬಿಡಿಯುಎಫ್‌ಸಿ) ಅನಾವರಣಗೊಂಡಿದೆ.
ಸೋಮವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕೆಲ ಮಾಜಿ ಫುಟ್ಬಾಲ್ ಆಟಗಾರರು ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿಯನ್ನು ಅನಾವರಣಗೊಳಿಸಿದರು.

ಮಂಗಳೂರು ಮೂಲದವರಾದ ಶರತ್ ಕಾಮತ್ ಅವರ ಮುಂದಾಳತ್ವದ ಬಿಡಿಯುಎಫ್‌ಸಿ ಈ ಸಾಲಿನ ಸೂಪರ್ ಡಿವಿಜನ್ ಲೀಗ್‌ನಲ್ಲಿ ಆಡಲಿದೆ. ಶರತ್ ಕಾಮತ್ ಸಿಐಎಲ್‌ನ ಮಾಜಿ ಆಟಗಾರ ಹಾಗೂ ಕೋಚ್ ಆಗಿದ್ದಾರೆ.
ಮಾಜಿ ಫುಟ್ಬಾಲ್ ಆಟಗಾರರಾಗಿರುವ ಶರತ್ ಕಾಮತ್ ಕೋಚಿಂಗ್‌ನಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಐಎಸ್‌ಎಲ್ ಚಾಂಪಿಯನ್ ತಂಡದ ಆಟಗಾರ ಅಭಿಷೇಕ್ ಜಗನ್, ಹಲವಾರು ಒಲಿಂಪಿಯನ್‌ಗಳೊಂದಿಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ಬದ್ರಿನಾಥ್ ರಾವ್, ಖ್ಯಾತ ಫುಟ್ಬಾಲ್ ಕೋಚ್ ಎಸ್.ಪಿ ಶಾಜಿ ಅವರೊಂದಿಗೆ ಸೇರಿ ಶರತ್ ಕಾಮತ್, ಬಿಡಿಯುಎಫ್‌ಸಿ ಕ್ಲಬ್ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here

two × four =