
ಬೆಂಗಳೂರು, ಆಗಸ್ಟ್ 27: ಸರ್ಜಾಪುರ ರಸ್ತೆಯಲ್ಲಿರುವ ಕನ್ನಲ್ಲಿಯಲ್ಲಿ ಸ್ಪೋರ್ಟ್ಸ್ ಕ್ಲಬ್ ಇನ್ ಡೋರ್ ಫ್ಲಡ್ ಲೈಟ್ ಕ್ರಿಕೆಟ್ ಟೂರ್ನಿಯಲ್ಲಿ ಆನಂದ್ ಟೀಮ್ ಪ್ರಶಸ್ತಿ ಗೆದ್ದುಕೊಂಡಿದೆ. ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಆನಂದ್ ಟೀಮ್, ಬೆಂಗಳೂರಿನ ಅಟ್ಯಾಕರ್ಸ್ ತಂಡವನ್ನು 20 ರನ್ ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಆನಂದ್ ಟೀಮ್ ನಿಗದಿತ 6 ಓವರ್ ಗಳಲ್ಲಿ 58 ರನ್ ಗಳಿಸಿದರೆ, ಅಟ್ಯಾಕರ್ಸ್ ತಂಡ 6 ಓವರ್ ಗಳಲ್ಲಿ 38 ರನ್ ಗಳನ್ನಷ್ಟೇ ಗಳಿಸಿ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು. ಆನಂದ್ ತಂಡದ ಸಲೀಮ್ ಟೂರ್ನಿಯ ಶ್ರೇಷ್ಠ ಬ್ಯಾಟ್ಸ್ ಮನ್ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಫೈನಲ್ ನಲ್ಲಿ 2 ಓವರ್ ಎಸೆದು ಒಂದು ಮೇಡನ್ ಸಹಿತ 3 ವಿಕೆಟ್ ಪಡೆದ ವಿನಯ್ ಟೂರ್ನಿಯ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು.