ಸ್ಯಾಫ್ ಕಪ್: ಪಾಕ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಭಾರತ

0
India pIndia players celebrate their 3-1 win against Pakistan in the semifinals of the SAFF Suzuki Cup at the Bangabandhu Stadium in Dhaka on Wednesday.layers celebrate after their victory over Pakistan. PC: AIFF

ಢಾಕಾ, ಸೆಪ್ಟೆಂಬರ್ 12: ಮಾನ್‌ವೀರ್ ಸಿಂಗ್ (49, 69ನೇ ನಿಮಿಷ) ಬಾರಿಸಿದ ಎರಡು ಗೋಲುಗಳು ಹಾಗೂ ಸುಮೀತ್ ಪಾಸಿ(83ನೇ ನಿಮಿಷ) ಗಳಿಸಿದ ಒಂದು ಗೋಲಿನ ನೆರವಿನಿಂದ ಭಾರತ ತಂಡ, ಸ್ಯಾಫ್ ಸುಜುಕಿ ಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1 ಗೋಲುಗಳಿಂದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಬಂಗಬಂಧು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಸುಲಭ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಪಾಕ್ ಪರ ಹಸನ್ ಬಶೀರ್(88ನೇ ನಿಮಿಷ) ಏಕೈಕ ಗೋಲು ಗಳಿಸಿದರು.
ಸೆಪ್ಟೆಂಬರ್ 15ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಮಾಲ್ದೀವ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಮಾಲ್ದೀವ್ಸ್ ತಂಡ ನೇಪಾಳವನ್ನು 3-0 ಗೋಲುಗಳಿಂದ ಮಣಿಸಿತು.

LEAVE A REPLY

Please enter your comment!
Please enter your name here

seven + eighteen =