ಸ್ಯಾಫ್ ಕಪ್ ಫುಟ್ಬಾಲ್: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿ

0
India coach Stephen Constantine.

ಢಾಕಾ, ಸೆಪ್ಟೆಂಬರ್ 10: ಪ್ರಶಸ್ತಿಯತ್ತ ಕಣ್ಣಿಟ್ಟಿರುವ ಭಾರತ ಫುಟ್ಬಾಲ್ ತಂಡ, ಸ್ಯಾಫ್ ಸುಜುಕಿ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಬುಧವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತ ವಿರುದ್ಧದ ಈ ಪಂದ್ಯ ವಿಶೇಷ ಎಂದು ಪಾಕಿಸ್ತಾನ ತಂಡದ ಜೆಶ್ ರೆಹ್ಮಾನ್ ಮತ್ತು ನಾಯಕ ಸದ್ದಾಂ ಹೊಸೇನ್ ಹೇಳಿದ್ದಾರೆ.
”ಭಾರತ ವಿರುದ್ಧ ಆಡುವುದು ಯಾವಾಗಲೂ ವಿಶೇಷ. ಪಾಕಿಸ್ತಾನ ವಿರುದ್ಧ ಆಡುವಾಗ ಭಾರತದ ಆಟಗಾರರಿಗೂ ಇದೇ ಅನುಭವವಾಗುತ್ತದೆ ಎಂದು ಭಾವಿಸುತ್ತೇನೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳಿಗೆ ದೊಡ್ಡ ಇತಿಹಾಸವೇ ಇದೆ. ಈ ಪಂದ್ಯಗಳಲ್ಲಿ ಭಾವನಾತ್ಮಕ ಅಂಶ ದೊಡ್ಡ ಮಟ್ಟದಲ್ಲಿ ಕೂಡಿರುತ್ತದೆ,” ಎಂದು ಜೆಶ್ ರೆಹ್ಮಾನ್ ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯ ನಮಗೆ ಕೇವಲ ಇನ್ನೊಂದು ಪಂದ್ಯವಷ್ಟೇ ಎಂದು ಭಾರತ ತಂಡದ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ಅಭಿಪ್ರಾಯಪಟ್ಟಿದ್ದಾರೆ.
”ಪಂದ್ಯದ ಬಗ್ಗೆ ನಮಗೆ ಅರಿವಿದೆ. ಆದರೆ ಇದರಲ್ಲಿ ಏನೂ ವ್ಯತ್ಯಾಸವಿಲ್ಲ. ಇದು ಮತ್ತೊಂದು ಪಂದ್ಯವಷ್ಟೇ. ಪಾಕಿಸ್ತಾನ ವಿರುದ್ಧದ ಪಂದ್ಯವೆಂದು ನಮ್ಮ ಮೇಲೆ ಒತ್ತಡ ಹಾಕಿಕೊಳ್ಳುವುದು ನಮಗೆ ಇಷ್ಟವಿಲ್ಲ. ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸುವ ವಿಶ್ವಾಸವಿದೆ,” ಎಂದು ಕಾನ್‌ಸ್ಟಂಟೈನ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

five × three =