ಹಾಂಕಾಂಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾರತ ತಂಡದ ಆಟಗಾರರು, ಕ್ರಿಕೆಟ್ ಶಿಶುಗಳ ಸಂಭ್ರಮ

0
PC: BCCI/Twitter

ಬೆಂಗಳೂರು, ಸೆಪ್ಟೆಂಬರ್ 19: ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ವೀರೋಚಿತ ಸೋಲು ಕಂಡ ಹಾಂಕಾಂಗ್ ತಂಡ ಪಂದ್ಯ ಸೋತರೂ ಕ್ರಿಕೆಟ್ ಪ್ರಿಯರ ಹೃದಯ ಗೆದ್ದಿತ್ತು.
ಕ್ರಿಕೆಟ್ ಶಿಶುಗಳ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಆಟಗಾರರು, ಪಂದ್ಯದ ನಂತರ ಹಾಂಕಾಂಗ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಕ್ರಿಕೆಟ್ ಶಿಶುಗಳ ಸಂಭ್ರಮಕ್ಕೆ ಕಾರಣರಾದರು. ತಮ್ಮ ಕ್ರಿಕೆಟ್ ಅನುಭವವನ್ನು ಭಾರತ ತಂಡದ ಆಟಗಾರರು ಹಾಂಕಾಂಗ್ ಆಟಗಾರರೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಹಾಂಕಾಂಗ್ ಕ್ರಿಕೆಟಿಗರು ಟೀಮ್ ಇಂಡಿಯಾ ಆಟಗಾರರೊಂದಿಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು.
ಮಂಗಳವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ಹಾಂಕಾಂಗ್ ತಂಡವನ್ನು 26 ರನ್‌ಗಳಿಂದ ಸೋಲಿಸಿತ್ತು.

ಟೀಮ್ ಇಂಡಿಯಾ ಆಟಗಾರರು ಹಾಂಕಾಂಗ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ಕ್ಷಣವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here

3 + 1 =