ಹಾಕಿ: ರಾಷ್ಟ್ರೀಯ ಕ್ಯಾಂಪ್‌ಗೆ 25 ಆಟಗಾರರು, ವಿಶ್ವಕಪ್ ಮೇಲೆ ಕೋಚ್ ಕಣ್ಣು

0

ಹೊಸದಿಲ್ಲಿ, ಸೆಪ್ಟೆಂಬರ್ 12: ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಹಾಕಿ ಇಂಡಿಯಾ ಬುಧವಾರ 25 ಆಟಗಾರರನ್ನು ಪ್ರಕಟಿಸಿದ್ದು, ಈ ಶಿಬಿರ ಸೆಪ್ಟೆಂಬರ್ 16ರಂದು ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಹಾಕಿ ತಂಡದ ಪ್ರಧಾನ ಕೋಚ್ ಹರೇಂದ್ರ ಸಿಂಗ್ ಮಾರ್ಗದರ್ಶನದಲ್ಲಿ ಅಕ್ಟೋಬರ್ 14ರವರೆಗೆ ತರಬೇತಿ ಶಿಬಿರದಲ್ಲಿ ನಡೆಯಲಿದೆ. ನಂತರ ಅಕ್ಟೋಬರ್ 18ರಿಂದ ಓಮನ್‌ನ ಮಸ್ಕತ್‌ನಲ್ಲಿ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಭಾಗವಹಿಸಲಿದೆ.

ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿರುವ ಆಟಗಾರರು
ಗೋಲ್‌ಕೀಪರ್ಸ್: ಪಿ.ಆರ್ ಶ್ರೀಜೇಶ್, ಸೂರಜ್ ಕರ್ಕೇರ, ಕೃಷ್ಣನ್ ಬಹದ್ದೂರ್ ಪಾಠಕ್.
ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಗುರಿಂದರ್ ಸಿಂಗ್, ವರುಣ್ ಕುಮಾರ್, ಕೊಥಾಜಿತ್ ಸಿಂಗ್, ಸುರೇಂದ್ರ ಕುಮಾರ್, ಜರ್ಮನ್‌ಪ್ರೀತ್ ಸಿಂಗ್, ಪ್ರದೀಪ್ ಸಿಂಗ್.
ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್, ಚಿಂಗ್ಲೆನ್ಸೇನ ಸಿಂಗ್, ಸುಮಿತ್, ಸಿಮ್ರನ್‌ಜೀತ್ ಸಿಂಗ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವಿವೇಕ್ ಸಾಗರ್ ಪ್ರಸಾದ್.
ಫಾರ್ವರ್ಡ್ಸ್: ಎಸ್.ವಿ ಸುನಿಲ್, ಆಕಾಶ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಸುಮಿತ್ ಕುಮಾರ್.

LEAVE A REPLY

Please enter your comment!
Please enter your name here

fifteen + 11 =