10 ವಿಕೆಟ್ಸ್ ವಿಶ್ವವಿಕ್ರಮಕ್ಕೆ 20 ವರ್ಷ.. ಸಲಾಂ ಜಂಬೋ..

0
PC: Twitter

ಬೆಂಗಳೂರು, ಫೆಬ್ರವರಿ 7: ಕನ್ನಡಿಗ ಅನಿಲ್ ಕುಂಬ್ಳೆ ಅವರ 10 ವಿಕೆಟ್ ಗಳ ವಿಶ್ವವಿಕ್ರಮಕ್ಕೆ ಇಂದಿಗೆ 20 ವರ್ಷ ತುಂಬಿದೆ. 1999ರಲ್ಲಿ ದೆಹಲಿಯ ಫಿರೋಜ್ ಷಾ ಕೋಚ್ಲಾ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕುಂಬ್ಳೆ ಪಾಕಿಸ್ತಾನದ ಎಲ್ಲಾ 10 ವಿಕೆಟ್ ಗಳನ್ನು ಕಬಳಿಸಿದ್ದರು.

ಈ ಅಮೋಘ ಸಾಧನೆಯೊಂದಿಗೆ ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಕಬಳಿಸಿದ ವಿಶ್ವದ 2ನೇ ಬೌಲರ್ ಎಂಬ ದಾಖಲೆ ಬರೆದಿದ್ದರು. ಕುಂಬ್ಳೆಗೂ ಮೊದಲು ಇಂಗ್ಲೆಂಡ್ ನ ಜಿಮ್ ಲೇಕರ್ ಈ ಸಾಧನೆ ಮಾಡಿದ್ದರು.

ಗೆಲ್ಲಲು 420 ರನ್ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ 207 ರನ್ನಿಗೆ ಆಲೌಟಾಗಿತ್ತು. 26.3 ಓವರ್ ಬೌಲಿಂಗ್ ಮಾಡಿದ್ದ ಕುಂಬ್ಳೆ 9 ಮೇಡನ್ ಗಳ ಸಹಿತ 74 ರನ್ ನೀಡಿ 10 ವಿಕೆಟ್ ಉರುಳಿಸಿದ್ದರು. ಆ ಪಂದ್ಯದಲ್ಲಿ ಕುಂಬ್ಳೆ ಅವರ 10 ವಿಕೆಟ್ ಗಳ ಎಲ್ಲಾ ನಿರ್ಧಾರಗಳನ್ನು ನೀಡಿದ್ದು ಕನ್ನಡಿಗ ಅಂಪೈರ್ ಎ.ವಿ ಜಯಪ್ರಕಾಶ್ ಎಂಬುದು ಮತ್ತೊಂದು ವಿಶೇಷ.

ಅನಿಲ್ ಕುಂಬ್ಳೆ ಅವರ 10 ವಿಕೆಟ್ ಸಾಧನೆಯ ಸ್ಕೋರ್ ಕಾರ್ಡ್ ಗೆ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

four × three =