100ನೇ ಪಂದ್ಯದಲ್ಲಿ ಕನ್ನಡತಿ ವೇದಾಗೆ ಜಯದ ಸಿಹಿ

0
PC: Veda/facebook

ಕೊಲಂಬೊ, ಸೆಪ್ಟೆಂಬರ್ 24: ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಸೋಮವಾರ ತಮ್ಮ ವೃತ್ತಿಜೀವನದ 100ನೇ ಅಂತರಾಷ್ಟ್ರೀಯ ಪಂದ್ಯವಾಡಿದ್ದಾರೆ. ಶ್ರೀಲಂಕಾ ವಿರುದ್ಧದ 4ನೇ ಟಿ20 ಪಂದ್ಯವನ್ನು ಗೆಲ್ಲುವುದರೊಂದಿಗೆ ವೇದಾ ಅವರ 100ರ ಸಂಭ್ರಮ ಇಮ್ಮಡಿಗೊಂಡಿದೆ.

ಜೆಮಿಮಾ ರಾಡ್ರಿಗ್ಸ್              PC: BCCI Women

ಕೊಲಂಬೊ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಸೋಮವಾರ ನಡೆದ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಅಲ್ಲದೆ ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ 3-0 ಅಂತರದಲ್ಲಿ ಸರಣಿ ಗೆದ್ದಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ನಿಗದಿತ 17 ಓವರ್‌ಗಳಲ್ಲಿ 5 ವಿಕೆಟ್‌ಗೆ 134 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಭಾರತ 15.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸುಲಭ ಜಯ ಪಡೆಯಿತು. ಮುಂಬೈನ 16 ವರ್ಷದ ಯುವ ಆಟಗಾರ್ತಿ ಜೆಮಿಮಾ ರಾಡ್ರಿಗ್ಸ್ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನೊಗೊಂಡ ಅಜೇಯ 52 ರನ್ ಸಿಡಿಸಿದರೆ, ಮಹಾರಾಷ್ಟ್ರದ ಆಟಗಾರ್ತಿ ಅನುಜಾ ಪಾಟೀಲ್ 42 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ ಅಜೇಯ 54 ರನ್ ಸಿಡಿಸಿ ಗೆಲುವಿನ ರೂವಾರಿಗಳಾದರು.
ತಮ್ಮ 100ನೇ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಆದರೆ ಫೀಲ್ಡಿಂಗ್‌ನಲ್ಲಿ ಮಿಂಚಿದ ವೇದಾ ಎರಡು ಕ್ಯಾಚ್‌ಗಳನ್ನು ಪಡೆದರು.

ವೇದಾ ಕೃಷ್ಣಮೂರ್ತಿ

ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾದ 25 ವರ್ಷದ ಬಲಗೈ ಬ್ಯಾಟ್ಸ್‌ವುಮನ್ ವೇದಾ 2011ರ ಜೂನ್ 23ರಂದು ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ನಲ್ಲಿ ಟಿ20 ಪಂದ್ಯವಾಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2011ರ ಜೂನ್ 30ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದ ವೇದಾ ತಮ್ಮ ಚೊಚ್ಚಲ ಪಂದ್ಯದಲ್ಲೇ 51 ರನ್ ಸಿಡಿಸಿ ಮಿಂಚಿದ್ದರು.
ಭಾರತ ಪರ ಇದುವರೆಗೆ 48 ಏಕದಿನ ಪಂದ್ಯಗಳನ್ನಾಡಿರುವ ವೇದಾ 25.90ರ ಸರಾಸರಿಯಲ್ಲಿ 8 ಅರ್ಧಶತಕಗಳ ಸಹಿತ 829 ರನ್ ಗಳಿಸಿದ್ದಾರೆ. ಅಲ್ಲದೆ 52 ಟಿ20 ಪಂದ್ಯಗಳಿಂದ 19.36ರ ಸರಾಸರಿಯಲ್ಲಿ 1 ಅರ್ಧಶತಕ ಸಹಿತ 639

PC: Veda/facebook

ರನ್ ಕಲೆ ಹಾಕಿದ್ದಾರೆ. ಅಲ್ಲದೆ ಅತ್ಯುತ್ತಮ ಫೀಲ್ಡರ್ ಆಗಿರುವ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 42 ಕ್ಯಾಚ್‌ಗಳನ್ನು ಪಡೆದಿದ್ದಾರೆ.

Brief scores:
Sri Lanka Women: 134/7 in 17 overs (Chamari Atapattu 31, Siriwardene 40; Anuja Patil 3/36) lost to India women: 137/3 in 15.4 overs (Jemimah Rodrigues 52 not out, Anuja Patil 54 not out; Ranasinghe 3/33) by 7 wickets.

LEAVE A REPLY

Please enter your comment!
Please enter your name here

thirteen + 17 =