100 ರಣಜಿ ಪಂದ್ಯಗಳ ಸರದಾರ ವಿನಯ್‌ಗೆ ಕೆಎಸ್‌ಸಿಎ ಸನ್ಮಾನ

0

ಬೆಳಗಾವಿ, ನವೆಂಬರ್ 20: ಕರ್ನಾಟಕ ಪರ 100 ರಣಜಿ ಪಂದ್ಯಗಳನ್ನುಪೂರ್ತಿಗೊಳಿಸಿದ ದಾವಣಗೆರೆ ಎಕ್ಸ್‌ಪ್ರೆಸ್ ಆರ್.ವಿನಯ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವತಿಯಿಂದ ಸನ್ಮಾನಿಸಲಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಮುಂಬೈ ವಿರುದ್ಧದ ರಣಜಿ ಪಂದ್ಯದ ಆರಂಭಕ್ಕೂ ಮುನ್ನ ಕೆಎಸ್‌ಸಿಎ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ರಣಜಿ ಪಂದ್ಯಗಳ ಶತಕವೀರ ವಿನಯ್ ಕುಮಾರ್ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು. ನಾಗ್ಪುರದಲ್ಲಿ ನಡೆದ ಕಳೆದ ವಿದರ್ಭ ವಿರುದ್ಧದ ಪಂದ್ಯದ ಮೂಲಕ ವಿನಯ್ ಕುಮಾರ್ 100 ಪಂದ್ಯಗಳ ಮೈಲುಗಲ್ಲು ನೆಟ್ಟಿದ್ದರು.
ಕೆಎಸ್‌ಸಿಎ ಸನ್ಮಾನಕ್ಕೆ ವಿನಯ್ ಕುಮಾರ್ ಟ್ವಿಟರ್ ನಲ್ಲಿ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

೨೦೦೪ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ವಿನಯ್ ಕುಮಾರ್ ಇಲ್ಲಿಯವರೆಗೆ ಆಡಿರುವ ೧೦೦ ಪಂದ್ಯಗಳಿಂದ ೩೮೫ ವಿಕೆಟ್‌ಗಳನ್ನು ಪಡೆದಿದ್ದಾರೆ.

ರಣಜಿ ಟ್ರೋಫಿ : ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳು
637: ರಾಜಿಂದರ್ ಗೋಯೆಲ್ (ಹರ್ಯಾಣ, ಸ್ಪಿನ್ನರ್)
530: ಎಸ್.ವೆಂಕಟರಾಘವನ್ (ತಮಿಳುನಾಡು, ಸ್ಪಿನ್ನರ್)
479: ಸುನಿಲ್ ಜೋಶಿ (ಕರ್ನಾಟಕ, ಸ್ಪಿನ್ನರ್)
442: ನರೇಂದ್ರ ಹಿರ್ವಾನಿ (ಮಧ್ಯಪ್ರದೇಶ, ಸ್ಪಿನ್ನರ್)
437: ಬಿ.ಎಸ್ ಚಂದ್ರಶೇಖರ್ (ಕರ್ನಾಟಕ, ಸ್ಪಿನ್ನರ್)
418: ವಾಮನ್ ಕುಮಾರ್ (ತಮಿಳುನಾಡು, ಸ್ಪಿನ್ನರ್)
405: ಸಾಯಿರಾಜ್ ಬಹುತುಲೆ (ಮುಂಬೈ, ಸ್ಪಿನ್ನರ್)
403: ಬಿಷನ್ ಸಿಂಗ್ ಬೇಡಿ (ದಿಲ್ಲಿ, ಸ್ಪಿನ್ನರ್)
401: ಉತ್ಪಲ್ ಚಟರ್ಜಿ (ಬಂಗಾಳ, ಸ್ಪಿನ್ನರ್)
385: ಆರ್.ವಿನಯ್ ಕುಮಾರ್ (ಕರ್ನಾಟಕ, ವೇಗದ ಬೌಲರ್)
370: ಎರಾಪಳ್ಳಿ ಪ್ರಸನ್ನ (ಕರ್ನಾಟಕ, ಸ್ಪಿನ್ನರ್)

ರಣಜಿ ಟ್ರೋಫಿ: ಕರ್ನಾಟಕ ಪರ ಅತಿ ಹೆಚ್ಚು ವಿಕೆಟ್ಸ್
ಆಟಗಾರ                 ವಿಕೆಟ್ಸ್     ಪಂದ್ಯ
ಸುನಿಲ್ ಜೋಶಿ          479       117
ಬಿ.ಎಸ್ ಚಂದ್ರಶೇಖರ್  437        76
ಆರ್.ವಿನಯ್ ಕುಮಾರ್ 385       100
ಎರಾಪಳ್ಳಿ ಪ್ರಸನ್ನ         370        71

ಅಂಕಿ ಅಂಶ ನೆರವು: ಚನ್ನಗಿರಿ ಕೇಶವಮೂರ್ತಿ

LEAVE A REPLY

Please enter your comment!
Please enter your name here

five × 2 =