100… 1000… 10000.. ಕೊಹ್ಲಿಗಿಲ್ಲ ಯಾರೂ ಸರಿಸಾಟಿ..!

0
PC: BCCI

ವಿಶಾಖಪಟ್ಟಣ, ಅಕ್ಟೋಬರ್ 25: ರನ್ ಮಷಿನ್ ವಿರಾಟ್ ಕೊಹ್ಲಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 10 ಸಾವಿರ ರನ್ ಪೂರ್ತಿಗೊಳಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 82 ರನ್ ಗಳಿಸಿದ್ದಾಗ ಕೊಹ್ಲಿ ಈ ದಾಖಲೆ ಬರೆದರು. ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಕೊಹ್ಲಿ ತಮ್ಮ 205ನೇ ಇನ್ನಿಂಗ್ಸ್ ನಲ್ಲಿ 10 ಸಾವಿರ ರನ್ ಗಳ ಗಡಿ ಮುಟ್ಟಿದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 259ನೇ ಇನ್ನಿಂಗ್ಸ್ ನಲ್ಲಿ 10 ಸಾವಿರ ರನ್ ಗಳ ಗಡಿ ಮುಟ್ಟಿದ್ದರು. ಸಚಿನ್ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

PC: BCCI

ಬುಧವಾರ ವಿರಾಟ್ ಕೊಹ್ಲಿ ದಾಖಲೆಗಳ ಮೇಲೊ ದಾಖಲೆಗಳನ್ನು ಬರೆದರು. 10 ಸಾವಿರ ರನ್ ಗಳನ್ನು ಪೂರ್ತಿಗೊಳಿಸಿದ್ದು ಒಂದೆಡೆಯಾದ್ರೆ, ಏಕದಿನ ಕ್ರಿಕೆಟ್ ನಲ್ಲಿ 37ನೇ ಶತಕವನ್ನೂ ಪೂರ್ತಿಗೊಳಿಸಿದರು. ಅಲ್ಲದೆ ಪ್ರಸಕ್ತ ವರ್ಷ 11 ಏಕದಿನ ಇನ್ನಿಂಗ್ಸ್ ಗಳಲ್ಲಿ ಒಂದು ಸಾವಿರ ರನ್ ಗಳನ್ನೂ ಪೂರ್ತಿಗೊಳಿಸಿದರು. ಈ ಮೂಲಕ ಒಂದೇ ವರ್ಷ ಅತಿ ವೇಗವಾಗಿ ಸಾವಿರ ರನ್ ಪೂರ್ತಿಗೊಳಿಸಿದ ವಿಶ್ವದಾಖಲೆ ನಿರ್ಮಿಸಿದರು.

ಅಲ್ಲದೆ ಏಕದಿನ ಕ್ರಿಕೆಟ್ ನಲ್ಲಿ 3ನೇ ಕ್ರಮಾಂಕದಲ್ಲಿ 30 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ದಾಖಲೆಯನ್ನೂ ಬರೆದರು. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ 6 ಏಕದಿನ ಶತಕಗಳನ್ನು ಸಿಡಿಸಿದ ಮೊದಲ ಆಟಗಾರನೆಂಬ ದಾಖಲೆಗೂ ಪಾತ್ರರಾದರು.

ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್: ವೇಗವಾಗಿ 10000 ರನ್ ಗಳಿಸಿದವರು

ವಿರಾಟ್ ಕೊಹ್ಲಿ: 205 ಇನ್ನಿಂಗ್ಸ್

ಸಚಿನ್ ತೆಂಡೂಲ್ಕರ್: 259 ಇನ್ನಿಂಗ್ಸ್

ಸೌರವ್ ಗಂಗೂಲಿ: 263 ಇನ್ನಿಂಗ್ಸ್

ರಿಕಿ ಪಾಂಟಿಂಗ್: 266 ಇನ್ನಿಂಗ್ಸ್

ಜಾಕ್ಸ್ ಕಾಲೀಸ್: 272 ಇನ್ನಿಂಗ್ಸ್

ಎಂ.ಎಸ್ ಧೋನಿ: 273 ಇನ್ನಿಂಗ್ಸ್

LEAVE A REPLY

Please enter your comment!
Please enter your name here

4 × two =