19 ವರ್ಷದೊಳಗಿನವರ ಏಷ್ಯಾ ಕಪ್: ಯಂಗ್ ಇಂಡಿಯಾ ಚಾಂಪಿಯನ್ಸ್

0

ಢಾಕಾ, ಅಕ್ಟೋಬರ್ 7: ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 144 ರನ್‌ಗಳಿಂದ ಬಗ್ಗು ಬಡಿದ ಯಂಗ್ ಇಂಡಿಯಾ, 19 ವರ್ಷದೊಳಗಿನವರ ಏಷ್ಯಾ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ಶೇರೆ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಜಯ ದಾಖಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯಂಗ್ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 304 ರನ್ ಕಲೆ ಹಾಕಿತು.

ನಂತರ ಗುರಿ ಬೆನ್ನಟ್ಟಿದ ಶ್ರೀಲಂಕಾ 38.4 ಓವರ್‌ಗಳಲ್ಲಿ ಕೇವಲ 160 ರನ್‌ಗಳಿಗೆ ಆಲೌಟಾಗಿ ಹೀನಾಯ ಸೋಲು ಅನುಭವಿಸಿತು. ಭಾರತ ಪರ ಮಾರಕ ದಾಳಿ ಸಂಘಟಿಸಿದ ದೆಹಲಿಯ ಎಡಗೈ ಸ್ಪಿನ್ನರ್ ಹರ್ಷ ತ್ಯಾಗಿ 38 ರನ್ನಿತ್ತು 6 ವಿಕೆಟ್ ಉರುಳಿಸಿದರು.
ಕರ್ನಾಟಕ ತಂಡದ ಮಾಜಿ ಕೋಚ್ ಕೆ.ಸನತ್ ಕುಮಾರ್, ಭಾರತ ತಂಡದ ಬೌಲಿಂಗ್ ಕೋಚ್ ಕಾರ್ಯ ನಿರ್ವಹಿಸಿದ್ದರು.

Brief scores
India U-19s: 304/3 in 50 overs (Yashaswi Jaiswal 85, Anuj Rawat 57, Devdutt Padikkal 31, Simran Singh 65 not out, Ayush Badoni 52 not out; DN Wellalage 1/24) beat Sri Lanka U-19s: 160 all out in 38.4 overs (KNM Fernando 49, ND Paranavithana 48; Harsh Tyagi 6/38, Siddharth Desai 2/37) by 144 runs.

LEAVE A REPLY

Please enter your comment!
Please enter your name here

7 − three =