2ನೇ ಟೆಸ್ಟ್: ಕಾಂಗರೂಗಳನ್ನು ಬಗ್ಗು ಬಡಿದ ಭಾರತ ‘ಎ’, ಸರಣಿ 1-1ರಲ್ಲಿ ಸಮಬಲ

0
PC: BCCI/Twitter

ಬೆಂಗಳೂರು, ಸೆಪ್ಟೆಂಬರ್ 11: ಚೈನಾಮನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರ ಆಲ್‌ರೌಂಡ್ ಆಟ ಹಾಗೂ ವಿಕೆಟ್ ಕೀಪರ್ ಕೆ.ಎಸ್ ಭರತ್ ಅವರ ಶತಕದ ನೆರವಿನಿಂದ ಭಾರತ ‘ಎ’ ತಂಡ, ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ಅಂತ್ಯಗೊಂಡ ಪ್ರವಾಸಿ ಆಸ್ಟ್ರೇಲಿಯಾ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಈ ಮೂಲಕ 2 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ‘ಎ’ ಗೆದ್ದಿತ್ತು.
ಪ್ರಥಮ ಇನ್ನಿಂಗ್ಸ್‌ನಲ್ಲಿ 159 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ‘ಎ’ ತಂಡ 213 ರನ್‌ಗಳಿಗೆ ಆಲೌಟಾಗಿ ಭಾರತ ‘ಎ’ ತಂಡದ ಗೆಲುವಿಗೆ 55 ರನ್‌ಗಳ ಸುಲಭ ಗುರಿ ನಿಗದಿ ಪಡಿಸಿತು. ಗುರಿ ಬೆನ್ನಟ್ಟಿದ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ‘ಎ’ ತಂಡ 6.2 ಓವರ್‌ಗಳಲ್ಲಿ 4 ವಿಕೆಟ್ ಒಪ್ಪಿಸಿ ಜಯಭೇರಿ ಬಾರಿಸಿತು.
ಆಸ್ಟ್ರೇಲಿಯಾದ ಪ್ರಥಮ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ಕುಲ್‌ದೀಪ್ ಯಾದವ್ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕಾಂಗರೂಗಳನ್ನು ಕಾಡಿ 3 ವಿಕೆಟ್ ಪಡೆದರು. ಲೋಕಲ್ ಹೀರೊ ಕೆ.ಗೌತಮ್ 39 ರನ್ನಿತ್ತು 3 ವಿಕೆಟ್ ಉರುಳಿಸಿ ಭಾರತ ‘ಎ’ ತಂಡದ ಗೆಲುವಿಗೆ ಕಾರಣರಾದರು.

Brief scores

Australia A: 346 and 213 all out in 102.5 overs (Travis Head 47, Peter Handscomb 56, Mitchell Marsh 36; K Gowtham 3/39, Kuldeep Yadav 3/46, Deepak Chahar 2/30, Shahbaz Nadeem 2/67).

India A: 505 and 55/4 in 6.2 overs (Ankit Bawne 28 not out, KS Bharat 12; Michael Neser 2/28, Chris Tremain 2/26).

LEAVE A REPLY

Please enter your comment!
Please enter your name here

eleven − eleven =