ರಾಹುಲ್ ದ್ರಾವಿಡ್ ರಣಜಿ ವಿಕ್ರಮಕ್ಕೆ ತುಂಬಿತು 22 ವರ್ಷ

0

ಬೆಂಗಳೂರು, ಏಪ್ರಿಲ್ 23: ಭಾರತ ಕ್ರಿಕೆಟ್ ತಂಡ ಮಹಾಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಕರ್ನಾಟಕಕ್ಕೆ ಫೇಮಸ್ ರಣಜಿ ಟ್ರೋಫಿ ಗೆಲ್ಲಿಸಿ ಇಂದಿಗೆ 22 ವರ್ಷಗಳು ತುಂಬಿವೆ.
ಬೆಂಗಳೂರುನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 1998ರ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶ ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಪ್ರಶಸ್ತಿ ಗೆದ್ದು, 5ನೇ ಬಾರಿ ರಣಜಿ ಚಾಂಪಿಯನ್ ಆಗಿತ್ತು. ನಿಧಾನಗತಿಯ ಆಟವಾಡುತ್ತಾರೆ ಎಂಬ ಕಾರಣಕ್ಕಾಗಿ ಭಾರತ ತಂಡದಿಂದ ಹೊರಬಿದ್ದಿದ್ದ ರಾಹುಲ್ ದ್ರಾವಿಡ್ ಕರ್ನಾಟಕ ತಂಡದ ನಾಯಕತ್ವ ವಹಿಸಿ ಫೈನಲ್ ಪಂದ್ಯದಲ್ಲಿ ಅಜೇಯ ದ್ವಿಶತಕ ಬಾರಿಸಿ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟಿದ್ದರು. ನಂತರ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ದ್ರಾವಿಡ್ 1999ರ ವಿಶ್ವಕಪ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು ಈಗ ಇತಿಹಾಸ. ಕರ್ನಾಟಕದ ಅಂದಿನ ರಣಜಿ ವಿಕ್ರಮದ ಸಂಭ್ರಮವನ್ನು ಮಾಜಿ ಸ್ಪಿನ್ನರ್ ಹಾಗೂ ಹಾಲಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಸುನಿಲ್ ಜೋಶಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

12 + one =