3ನೇ ಏಕದಿನ: ಮಿಥಾಲಿ ರಾಜ್ ಶತಕ ವ್ಯರ್ಥ, ಲಂಕಾ ವಿರುದ್ಧ ಭಾರತಕ್ಕೆ ಸೋಲು

0
PC: BCCI Women

ಕಾಟುನಾಯಕೆ (ಶ್ರೀಲಂಕಾ), ಸೆಪ್ಟೆಂಬರ್ 16: ನಾಯಕಿ ಮಿಥಾಲಿ ರಾಜ್(125*) ಅವರ 7ನೇ ಏಕದಿನ ಶತಕದ ನಡುವೆಯೂ ಭಾರತ ಮಹಿಳಾ ತಂಡ, ಆತಿಥೇಯ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳ ಸೋಲು ಕಂಡಿದೆ.
ಈ ಪಂದ್ಯವನ್ನು ಸೋತರೂ 3 ಪಂದ್ಯಗಳ ಸರಣಿಯನ್ನು ಭಾರತದ ವನಿತೆಯರು 2-1ರ ಅಂತರದಲ್ಲಿ ಗೆದ್ದುಕೊಂಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿತು. ನಾಯಕಿ ಮಿಥಾಲಿ 143 ಎಸೆತಗಳಲ್ಲಿ 14 ಬೌಂಡರಿಗಳು ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 125 ರನ್ ಗಳಿಸಿದರೆ, ಸ್ಮತಿ ಮಂಧನ 62 ಎಸೆತಗಳಲ್ಲಿ 51 ರನ್ ಸಿಡಿಸಿದರು.
ಸವಾಲಿನ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 49.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿ ಸರಣಿಯಲ್ಲಿ ಮೊದಲ ಜಯ ದಾಖಲಿಸಿತು. ಆಕರ್ಷಕ ಶತಕ ದಾಖಲಿಸಿದ ನಾಯಕಿ ಚಾಮರಿ ಅಟಪಟ್ಟು 133 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 115 ರನ್ ಗಳಿಸಿ ಗೆಲುವಿನ ರೂವಾರಿಯಾದರು.

Brief scores
India Women: 253/5 in 50 overs (Mithali Raj 125 not out, Smriti Mandhana 51, Deepti Sharma 38; Prabodhani 1/20, Chmari Atapattu 1/25).
Sri Lanka Women: 257/7 in 49.5 overs (Chamari Atapattu 115, Hasini Perera 45; Julan Goswami 2/39, Mansi Joshi 2/43).

LEAVE A REPLY

Please enter your comment!
Please enter your name here

six − five =