3 ವರ್ಷದವನಿದ್ದಾಗ್ಲೇ ತಾಯಿಯನ್ನು ಕಳೆದುಕೊಂಡಿದ್ದ ಪೃಥ್ವಿ ಶಾ!

0
PC: BCCI

ರಾಜ್‌ಕೋಟ್, ಅಕ್ಟೋಬರ್ 4: ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲೇ ಅಮೋಘ ಶತಕ ಬಾರಿಸಿ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ಮುಂಬೈನ ಪೃಥ್ವಿ ಶಾ ಅವರ ಬದುಕು ಹೂವಿನ ಮೇಲಿನ ನಡಿಗೆಯಲ್ಲ.
ಪೃಥ್ವಿ ಶಾ 3 ವರ್ಷದ ಬಾಲಕನಾಗಿದ್ದಾಗ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ಕಾಯಿಲೆಯಿಂದ ಬಳಲುತ್ತಿದ್ದ ತಾಯಿ ತೀರಿಕೊಂಡಾಗ ಪೃಥ್ವಿ ಇನ್ನೂ ಚಿಕ್ಕ ಹುಡುಗ. ಅಂತಹ ಸಂದರ್ಭದಲ್ಲಿ ಅವರನ್ನು ಸಾಕಿ ಸಲಹಿ ಇಂದು ಟೀಮ್ ಇಂಡಿಯಾ ಪರ ಆಡುವಂತೆ ಮಾಡಿರುವುದು ತಂದೆ ಪಂಕಜ್ ಶಾ ಅವರ ಶ್ರಮ ಮತ್ತು ಬದ್ಧತೆ.
ಬಟ್ಟೆ ವ್ಯಾಪಾರಿಯಾಗಿದ್ದ ಪಂಕಜ್ ಶಾ ಪ್ರತಿ ದಿನ 60 ಕಿ.ಮೀ ದೂರದಲ್ಲಿದ್ದ ಕ್ರೀಡಾಂಗಣಕ್ಕೆ ಮಗನನ್ನು ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸುತ್ತಿದ್ದರು. ಕೆಲಸ ಮಾಡಿಕೊಂಡು ಮಗನನ್ನು ಸಲಹುವುದು ಕಷ್ಟವಾಗಿದ್ದರಿಂದ ತಮ್ಮ ಬದುಕನ್ನು ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಮೀಸಲಿರುವ ಉದ್ದೇಶದಿಂದ ಕೆಲಸವನ್ನೇ ಬಿಟ್ಟು ಮಗನ ಬೆನ್ನಿಗೆ ನಿಂತಿದ್ದರು ಪಂಕಜ್ ಶಾ.
ತಂದೆಯ ಕನಸನ್ನು ಇಂದು ಪೃಥ್ವಿ ನನಸು ಮಾಡಿದ್ದಾನೆ. ಈ ವರ್ಷದ ಜನವರಿಯಲ್ಲಿ ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆದ್ದು ಕೊಟ್ಟಿದ್ದ ಪೃಥ್ವಿ ಶಾ ಇದೀಗ ಆಡಿದ ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಬಾರಿಸಿ ತಾವು ಕ್ರಿಕೆಟ್ ಜಗತ್ತಿನ ಮುಂದಿನ ದೊಡ್ಡ ಸ್ಟಾರ್ ಎಂಬುದನ್ನು ಸಾರಿ ಹೇಳಿದ್ದಾರೆ.
ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿದ ಸಾಧನೆ ಪೃಥ್ವಿ ಅವರದ್ದಾಗಿದೆ.

LEAVE A REPLY

Please enter your comment!
Please enter your name here

three × 2 =