4ನೇ ಟೆಸ್ಟ್: ಗೆಲುವು ಕೈಚೆಲ್ಲಿದ ನಂ.1 ಭಾರತ, ಸರಣಿ ಇಂಗ್ಲೆಂಡ್ ಕೈವಶ

0
ಸೌಥಾಂಪ್ಟನ್, ಸೆಪ್ಟೆಂಬರ್ 2: ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದ ವಿಶ್ವದ ನಂ.1 ಟೆಸ್ಟ್ ತಂಡ ಭಾರತ, ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಕೈ ಚೆಲ್ಲಿ 60 ರನ್‌ಗಳ ಸೋಲುಂಡಿದೆ. ಇದರೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ 3-1ರ ಅಂತರದಲ್ಲಿ ಗೆದ್ದುಕೊಂಡಿದೆ.
ರೋಸ್ ಬಾಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 245 ರನ್‌ಗಳ ಗುರಿ ಪಡೆದ ಟೀಮ್ ಇಂಡಿಯಾ ತನ್ನ 2ನೇ ಇನ್ನಿಂಗ್ಸ್‌ನಲ್ಲಿ 184 ರನ್‌ಗಳಿಗೆ ಆಲೌಟಾಗಿ ಕ್ರಿಕೆಟ್ ಜನಕರ ಮುಂದೆ ಸೋಲೊಪ್ಪಿಕೊಂಡಿತು. ಸ್ಪರ್ಧಾತ್ಮಕ ಪಿಚ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ(58) ಮತ್ತು ಉಪನಾಯಕ ಅಜಿಂಕ್ಯ ರಹಾನೆ(51) ಮಾತ್ರ ಹೋರಾಟ ಪ್ರದರ್ಶಿಸಿದರು.
22 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತಂಡ ತೀರಾ ಸಂಕಷ್ಟದಲ್ಲಿದ್ದಾಗ ನಾಯಕ-ಉಪನಾಯಕರ ಜೋಡಿ 4ನೇ ವಿಕೆಟ್‌ಗೆ 101 ರನ್ ಸೇರಿಸಿ ಗೆಲುವಿಗೆ ಆಸೆ ಚಿಗುರುವಂತೆ ಮಾಡಿತು. ಆದರೆ ಚಹಾ ವಿರಾಮಕ್ಕೂ ಸ್ವಲ್ಪ ಹೊತ್ತಿಗೆ ಮುನ್ನ ನಾಯಕ ವಿರಾಟ್ ಕೊಹ್ಲಿ, ಆಫ್ ಸ್ಪಿನ್ನರ್ ಮೊಯೀನ್ ಅಲಿ ಅವರಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ಭಾರತದ ಜಯದ ಕನಸು ಕಮರಿತು.
ಪ್ರಥಮ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ಮೊಯೀನ್ ಅಲಿ, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕೊಹ್ಲಿ ಪಡೆಯನ್ನು ಇನ್ನಿಲ್ಲದಂತೆ ಕಾಡಿ 71 ರನ್‌ಗಳಿಗೆ 4 ವಿಕೆಟ್ ಉರುಳಿಸಿದರು. ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸೆಪ್ಟೆಂಬರ್ 7ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಆರಂಭವಾಗಲಿದೆ.
 
Brief score
England: 246 & 271 all out in 96.1 overs (Jos Bultler 69, Sam Curran 46, Joe Root 48; Mohammed Shami 4/57, Ishant Sharma 2/36, Jaspreet Bumrah 1/51, R Ashwin 1.84).
India: 273 & 184 all out in 69.4 overs (Virat Kohli 58, Ajinkya Rahane 51, R Ashwin 25, Rishabh Pant 18; Moeen Ali 4/71, Ben Stokes 2/34, James Anderson 2/33).

LEAVE A REPLY

Please enter your comment!
Please enter your name here

twelve − 6 =