40ನೇ ವಯಸ್ಸಿನಲ್ಲೂ ರಣಜಿ ಟ್ರೋಫಿಗೆ ಈತನೇ ಕಿಂಗ್.. ಈತನಿಗಿಲ್ಲ ಯಾರೂ ಸಾಟಿ..!

0
PC: Twitter

ವಯನಾಡ್, ಜನವರಿ 24: ವಿದರ್ಭ ಪರ ಆಡುತ್ತಿರುವ ಮುಂಬೈನ ಅನುಭವಿ ಬ್ಯಾಟ್ಸ್ ಮನ್ ವಾಸಿಂ ಜಾಫರ್ ರಣಜಿ ಟ್ರೋಫಿ ಇತಿಹಾಸದಲ್ಲಿ ಯಾರೂ ಮಾಡದ ದಾಖಲೆ ಬರೆದಿದ್ದಾರೆ.

ಪ್ರಸಕ್ತ ರಣಜಿ ಟ್ರೋಫಿ ಸಾಲಿನಲ್ಲಿ ವಿದರ್ಭ ಪರ ಸಾವಿರ ರನ್ ಕಲೆ ಹಾಕಿರುವ ಜಾಫರ್, ಇದರೊಂದಿಗೆ ಎರಡು ಪ್ರತ್ಯೇಕ ರಣಜಿ ಋತುಗಳಲ್ಲಿ ಸಾವಿರ ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 2008-09ನೇ ಸಾಲಿನಲ್ಲಿ ಮುಂಬೈ ಪರ 1260 ರನ್ ಗಳಿಸಿದ್ದರು. ಇದೀಗ ವಿದರ್ಭ ಪರ 10 ಪಂದ್ಯಗಳಿಂದ 77.15ರ ಸರಾಸರಿಯಲ್ಲಿ 4 ಶತಕಗಳ ಸಹಿತ 1003 ರನ್ ಗಳಿಸಿದ್ದಾರೆ.

40 ವರ್ಷದ ವಾಸಿಂ ಜಾಫರ್ ವಯನಾಡ್ ನಲ್ಲಿ ನಡೆಯುತ್ತಿರುವ ಕೇರಳ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ 31 ರನ್ ಗಳಿಸಿದ್ದ ವೇಳೆ ಪ್ರಸಕ್ತ ಸಾಲಿನಲ್ಲಿ ಸಾವಿರ ರನ್ ಪೂರ್ತಿಗೊಳಿಸಿದರು.

1996-97ನೇ ಸಾಲಿನಲ್ಲಿ ಪ್ರಥಮದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವಾಸಿಂ ಜಾಫರ್, 251 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 51.42ರ ಸರಾಸರಿಯಲ್ಲಿ 57 ಶತಕ, 88 ಅರ್ಧಶತಕಗಳ ಸಹಿತ 19079 ರನ್ ಗಳಿಸಿದ್ದಾರೆ.

ರಣಜಿ ಟ್ರೋಫಿ 2018-19: ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

two × 4 =