5ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ಉಡೀಸ್, ಭಾರತಕ್ಕೆ ಸರಣಿ

0
PC: BCCI/Twitter

ತಿರುವನಂತಪುರಂ, ನವೆಂಬರ್ 1: ಭಾರತದ ಮಾರಕ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉದುರಿ ಹೋದ ವೆಸ್ಟ್ ಇಂಡೀಸ್ ತಂಡ 5ನೇ ಏಕದಿನ ಪಂದ್ಯದಲ್ಲಿ 9 ವಿಕೆಟ್ ಗಳ ಹೀನಾಯ ಸೋಲು ಕಾಣುವುದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 3-1ರ ಅಂತರದಲ್ಲಿ ಗೆದ್ದುಕೊಂಡಿದೆ.

ಗ್ರೀನ್ ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, 31.5 ಓವರ್ ಗಳಲ್ಲಿ ಕೇವಲ 103 ರನ್ನಿಗೆ ಕುಸಿಯಿತು. ಭಾರತ ಪರ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ(4/33) 4 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ(2/11) ಮತ್ತು ಖಲೀಲ್ ಅಹ್ಮದ್(2/29) ತಲಾ 2 ವಿಕೆಟ್ ಉರುಳಿಸಿದರು.

ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ 14.5 ಓವರ್ ಗಳಲ್ಲಿ 1 ವಿಕೆಟ್ ಗೆ 105 ರನ್ ಗಳಿಸಿ ಸರಣಿ ಕೈವಶ ಮಾಡಿಕೊಂಡಿತು. ಉಪನಾಯಕ ರೋಹಿತ್ ಶರ್ಮಾ 56 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಸ್ ನೆರವಿನಿಂದ ಅಜೇಯ 63 ರನ್ ಸಿಡಿಸಿದರೆ, ನಾಯಕ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 6 ಬೌಂಡರಿಗಳನ್ನೊಳಗೊಂಡ ಅಜೇಯ 33 ರನ್ ಗಳಿಸಿದರು.

Brief scores: West Indies: 103 all out in 31.5 overs (Marlan Samuels 24, R Powell 16; Ravindra Jadeja 4/33, Jaspreet Bumrah 2/11, Khaleel Ahmed 2/29) lost to India: 105/1 in 14.5 overs (Rohit Sharma 63 not out, Virat Kohli 33 not out) by 9 wickets.

 

 

 

LEAVE A REPLY

Please enter your comment!
Please enter your name here

2 × three =