5-ಎ-ಸೈಡ್ ರಾಷ್ಟ್ರೀಯ ಹಾಕಿ: ಕರ್ನಾಟಕ ಚಾಂಪಿಯನ್ಸ್

0

ಬೆಂಗಳೂರು, ಸೆಪ್ಟೆಂಬರ್ 23: ಅಮೋಘ ಪ್ರದರ್ಶನವಿತ್ತ ಆತಿಥೇಯ ಕರ್ನಾಟಕ ತಂಡ, ಫೈನಲ್‌ನಲ್ಲಿ ಹರ್ಯಾಣವನ್ನು 4-3 ಗೋಲುಗಳಿಂದ ಸೋಲಿಸಿ 5-ಎ-ಸೈಡ್ ಹಿರಿಯ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ಫೈನಲ್ ಪಂದ್ಯದ ಮೊದಲ 9 ನಿಮಿಷಗಳಲ್ಲೇ ಹಾಕಿ ಕರ್ನಾಟಕ ತಂಡ 2-0 ಗೋಲುಗಳ ಮುನ್ನಡೆ ಪಡೆಯಿತು. ಆದರೆ ದ್ವಿತೀಯಾರ್ಧದಲ್ಲಿ ಹಾಕಿ ಹರ್ಯಾಣ ತಂಡ ತಿರುಗೇಟು ನೀಡಿ 2-2ರಲ್ಲಿ ಸಮಬಲ ಸಾಧಿಸಿತು. ಆದರೆ ಕೊನೆಯ 4 ನಿಮಿಷಗಳಲ್ಲಿ ಮತ್ತೆರಡು ಗೋಲು ಗಳಿಸಿದ ಕರ್ನಾಟಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಕರ್ನಾಟಕ ಪರ ದಾಖಲಾದ ನಾಲ್ಕೂ ಗೋಲುಗಳನ್ನು ಮೊಹಮ್ಮದ್ ರಹೀಲ್ 9, 9, 17 ಮತ್ತು 20ನೇ ನಿಮಿಷಗಳಲ್ಲಿ ಗಳಿಸಿದರು. ಹರ್ಯಾಣ ಪರ ಗಗನ್‌ದೀಪ್ ಸಿಂಗ್(10), ಮನ್‌ಪ್ರೀತ್(12) ಮತ್ತು ಭರತ್(18) ತಲಾ ಒಂದು ಗೋಲು ಗಳಿಸಿದರು.
3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ 5-4 ಗೋಲುಗಳಿಂದ ಒಡಿಶಾ ತಂಡವನ್ನು ಸೋಲಿಸಿತು.

LEAVE A REPLY

Please enter your comment!
Please enter your name here

nineteen − 16 =