5-ಎ-ಸೈಡ್ ಹಾಕಿ: ಕರ್ನಾಟಕ ತಂಡ ಸೆಮಿಫೈನಲ್‌ಗೆ ಲಗ್ಗೆ

0

ಬೆಂಗಳೂರು, ಸೆಪ್ಟೆಂಬರ್ 21: ತಮಿಳುನಾಡು ತಂಡದ ವಿರುದ್ಧ 8-1 ಗೋಲುಗಳ ಏಕಪಕ್ಷೀಯ ಗೆಲುವು ದಾಖಲಿಸಿದ ಕರ್ನಾಟಕದ ಪುರುಷರ ತಂಡ, 3ನೇ ಹಾಕಿ ಇಂಡಿಯಾ 5-ಎ-ಸೈಡ್ ರಾಷ್ಟ್ರೀಯ ಹಿರಿಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಪರ ಮೊಹಮ್ಮದ್ ರಹೀಲ್ ವೌಸೀನ್ ನಾಲ್ಕು ಗೋಲು (10, 13, 17, 18ನೇ ನಿಮಿಷ) ಬಾರಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. ಉಳಿದಂತೆ ಆ‘ರಣ್ ಸುದೇವ್(7ನೇ ನಿಮಿಷ), ಪೃಥ್ವಿ ರಾಜ್(10ನೇ ನಿಮಿಷ), ಲಿಖಿತ್ ಕೆಬಿ(15ನೇ ನಿಮಿಷ) ಮತ್ತು ಕೆ.ಪಿ ಸೋಮಯ್ಯ(19ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ತಮಿಳುನಾಡು ಪರ ಸೆಂಥಿಲ್ ಆರ್.ನಾಯಗಮ್(19ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.
ಸೆಪ್ಟೆಂಬರ್ 23ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಒಡಿಶಾ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

five × 2 =