5-ಎ-ಸೈಡ್ ಹಾಕಿ: ಫೈನಲ್‌ನಲ್ಲಿ ಕರ್ನಾಟಕಕ್ಕೆ ಹರ್ಯಾಣ ಎದುರಾಳಿ

0

ಬೆಂಗಳೂರು, ಸೆಪ್ಟೆಂಬರ್ 23: ಮೊಹಮ್ಮದ್ ರಹೀಲ್ ವೌಸೀನ್ ಅವರ ನಾಲ್ಕು ಗೋಲುಗಳ ನೆರವಿನಿಂದ ಒಡಿಶಾ ತಂಡವನ್ನು 11-3 ಗೋಲುಗಳಿಂದ ಬಗ್ಗು ಬಡಿದ ಕರ್ನಾಟಕ ತಂಡ 5-ಎ-ಸೈಡ್ ಹಾಕಿ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದೆ. ಫೈನಲ್‌ನಲ್ಲಿ ಕರ್ನಾಟಕ ತಂಡ, ಹರ್ಯಾಣ ತಂಡವನ್ನು ಎದುರಿಸಲಿದೆ.
ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಪರ ಸ್ಥಳೀಯ ಆಟಗಾರ ವೌಸೀನ್(2, 4, 7, 12ನೇ ನಿಮಿಷ) ನಾಲ್ಕು ಗಳನ್ನು ಬಾರಿಸಿದರೆ, ಆಭರಣ್ ಸುದೇವ್(6, 16ನೇ ನಿಮಿಷ), ಪೃಥ್ವಿ ರಾಜ್(11, 13ನೇ ನಿಮಿಷ) ತಲಾ ಎರಡು ಗೋಲು ಗಳಿಸಿದರೆ, ಲಿಖಿತ್ ಎಂ.ಬಿ(9), ಕೆ.ಟಿ ಕಾರಿಯಪ್ಪ(10) ಮತ್ತು ಮುತ್ತಣ್ಣ ವಿಟಿ(17) ತಲಾ ಒಂದು ಗೋಲು ಗಳಿಸಿದರು.
ಮತ್ತೊಂದು ಸೆಮಿಫೈನಲ್‌ನಲ್ಲಿ ಹರ್ಯಾಣ ತಂಡ 5-0 ಗೋಲುಗಳಿಂದ ಮಹಾರಾಷ್ಟ್ರಕ್ಕೆ ಸೋಲುಣಿಸಿತು.

LEAVE A REPLY

Please enter your comment!
Please enter your name here

twenty + 15 =