ಕೊಡಗಿನ ಕಲಿ ಕಾರಿಯಪ್ಪಗೆ ಬಿಗ್ ಗಿಫ್ಟ್ ಕೊಟ್ಟ ರಸೆಲ್.. ಗಿಫ್ಟ್ ಏನ್ ಗೊತ್ತಾ..?

0

ಬೆಂಗಳೂರು, ಏಪ್ರಿಲ್ 6: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ದೈತ್ಯ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಐಪಿಎಲ್-12 ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ.

ಶುಕ್ರವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ ರಸೆಲ್ ಕೇವಲ 13 ಎಸೆತಗಳಲ್ಲಿ ಅಜೇಯ 48 ರನ್ ಸಿಡಿಸಿ ರಾಯಲ್ ಚಾಲೆಂಜರ್ಸ್ ಸೋಲಿಗೆ ಕಾರಣರಾಗಿದ್ದರು.  ರಸೆಲ್ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ಸ್ ಒಳಗೊಂಡಿದ್ದವು.

ಪಂದ್ಯದ ನಂತರ ತಾವು 7 ಸಿಕ್ಸರ್ಸ್ ಸಿಡಿಸಿದ ಬ್ಯಾಟನ್ನು ರಸೆಲ್, ಕನ್ನಡಿಗ ಕೆ.ಸಿ ಕಾರಿಯಪ್ಪ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕೊಡಗಿನ ಕಲಿ ಕಾರಿಯಪ್ಪ ಕೂಡ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. 

LEAVE A REPLY

Please enter your comment!
Please enter your name here

three × two =