ಐಪಿಎಲ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕನ್ನಡಿಗ ಕುಂಬ್ಳೆ ಹೆಡ್ ಕೋಚ್

0

ಬೆಂಗಳೂರು, ಅಕ್ಟೋಬರ್ 11: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಟೀಮ್ ಇಂಡಿಯಾ ಮಾಜಿ ಕೋಚ್, ಕನ್ನಡಿಗ ಅನಿಲ್ ಕುಂಬ್ಳೆ ಐಪಿಎಲ್ನ ಮುಂದಿನ ಆವೃತ್ತಿಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಲ್ಲಿಯವರೆಗೆ ಒಮ್ಮೆಯೂ ಐಪಿಎಲ್ ಕಿರೀಟ ಗೆದ್ದಿಲ್ಲ. 2014ರಲ್ಲಿ ಫೈನಲ್ ತಲುಪಿದ್ದೇ ತಂಡದ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ 2016ರಿಂದ ಪ್ರಧಾನ ತರಬೇತುದಾರರನ್ನು ಬದಲಿಸುತ್ತಲೇ ಬಂದಿದೆ. 2016ರಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಕೋಚ್ ಆಗಿದ್ದರು. 2017ರಲ್ಲಿ ಸಂಜಯ್ ಬಾಂಗರ್, 2018ರಲ್ಲಿ ಆಸ್ಟ್ರೇಲಿಯಾದ ಬ್ರಾಡ್ ಹಾಡ್ಜ್, 2019ರಲ್ಲಿ ನ್ಯೂಜಿಲೆಂಡ್ನ ಮೈಕ್ ಹೆಸನ್ ಕಿಂಗ್ಸ್ ಇಲೆವೆನ್ ಕೋಚ್ ಆಗಿದ್ದರು.

ಕಿಂಗ್ಸ್ ಇಲೆವೆನ್ ನಾಯಕ ರವಿಚಂದ್ರನ್ ಅಶ್ವಿನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಲಿದ್ದಾರೆ ಎನ್ನಲಾಗುತ್ತಿದೆ. ಕಿಂಗ್ಸ್ ಇಲೆವೆನ್ ಜೊತೆ ಅಶ್ವಿನ್ ಪಾರ್ಟ್ನರ್ಶಿಪ್ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಅಶ್ವಿನ್ ಅವರನ್ನು ಮುಂದುವರಿಸಲು ಕುಂಬ್ಳೆ ಅವರಿಗೂ ಇಷ್ಟವಿಲ್ಲದಿದ್ದರೆ, ಕನ್ನಡಿಗ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನೂತನ ನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಕರ್ನಾಟಕದ ಮತ್ತಿಬ್ಬರು ಸ್ಟಾರ್ ಬ್ಯಾಟ್ಸ್ಮನ್ಗಳಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಕಿಂಗ್ಸ್ ಇಲೆವೆನ್ ತಂಡದಲ್ಲಿದ್ದಾರೆ.

LEAVE A REPLY

Please enter your comment!
Please enter your name here

11 + eleven =