ಕ್ರಿಕೆಟರ್ ಆಗೋದಕ್ಕೂ ಮೊದ್ಲು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಏನಾಗಿದ್ರು ಗೊತ್ತಾ..?

0
PC: Anil Kumble/Twitter

ಬೆಂಗಳೂರು, ಮಾರ್ಚ್ 19: ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ಬೌಲರ್. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಪರ ಅತಿ ಹೆಚ್ಚು 619 ವಿಕೆಟ್ಸ್ ಪಡೆದಿರುವ ಬೌಲರ್. ಅಷ್ಟೇ ಅಲ್ಲದೆ, ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಕುಂಬ್ಳೆ 3ನೇ ಸ್ಥಾನದಲ್ಲಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 956 ವಿಕೆಟ್ಸ್ ಪಡೆದಿರುವ ಕುಂಬ್ಳೆ ಬೌಲರ್ ಆಗೋದಕ್ಕೂ ಮೊದ್ಲು ಕ್ರಿಕೆಟ್ ಸ್ಕೋರರ್ ಆಗಿದ್ದರಂತೆ. ಈ ಅಚ್ಚರಿಯ ಸಂಗತಿಯನ್ನು ಸ್ವತಃ ಕುಂಬ್ಳೆ ಅವರೇ, ಬೆಂಗಳೂರಿನಲ್ಲಿ ನಡೆದ ‘ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್’ನ 100ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಹೊರ ಹಾಕಿದ್ದಾರೆ.

”ನಾನು ನನ್ನ ಕರಿಯರ್ ಅನ್ನು ಸ್ಕೋರರ್ ಆಗಿ ಪ್ರಾರಂಭಿಸಿದೆ. ಆ ದಿನಗಳಲ್ಲಿ ಯಾರಿಗೂ ಕೂಡ ನೇರವಾಗಿ ಪಂದ್ಯಗಳನ್ನಾಡುವ ಅವಕಾಶ ಸಿಗುತ್ತಿರಲಿಲ್ಲ. ಜಯನಗರದಿಂದ ಐಟಿಐ ಮೈದಾನಕ್ಕೆ ಸೈಕಲ್ ಅಥವಾ ಬಸ್ ನಲ್ಲಿ ಹೋಗಬೇಕಿತ್ತು. ನಂತರ ಅಲ್ಲಿ ಸ್ಕೋರಿಂಗ್ ಮಾಡಬೇಕಿತ್ತು. ಈಗಿನ ಪೀಳಿಗೆಯ ಯುವ ಕ್ರಿಕೆಟಿಗರಿಗೆ ಸ್ಕೋರ್ ಬುಕ್ ಕೊಟ್ರೆ ಸ್ಕೋರಿಂಗ್ ಹೇಗೆ ಮಾಡೋದು ಅನ್ನೋದೇ ಅವರಿಗೆ ಬಹುಶಃ ಗೊತ್ತಾಗಲ್ಲ” ಎಂದು ಕುಂಬ್ಳೆ ತಮ್ಮ ಕ್ರಿಕೆಟ್ ಪಯಣದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

3 × 3 =