ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿಯೊಂದಿಗೆ ಪಾರ್ಟಿ ಮಾಡಿದ ಅರ್ಜುನ್ ತೆಂಡೂಲ್ಕರ್..!

0
PC: twitter

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯೆಲ್ ವ್ಯಾಟ್ ಅವರೊಂದಿಗೆ ಪಾರ್ಟಿ ಮಾಡಿ ಸುದ್ದಿಯಾಗಿದ್ದಾರೆ.

ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದ ಮುಂಬೈನಲ್ಲಿದ್ದು, ಶುಕ್ರವಾರ ರಾತ್ರಿ ಮುಂಬೈನ ಟ್ರೈಟೆಂಡ್ ಹೋಟೆಲ್ ನಲ್ಲಿ ಇಬ್ಬರೂ ಡಿನ್ನರ್ ಸವಿದಿದ್ದಾರೆ. ಅರ್ಜುನ್ ಹಾಗೂ ಡೇನಿಯೆಲ್ ವ್ಯಾಟ್ ಸ್ನೇಹಿತರಾಗಿದ್ದು, ಇಂಗ್ಲೆಂಡ್ ನಲ್ಲೂ ಈ ಹಿಂದೆ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಅರ್ಜುನ್ ತೆಂಡೂಲ್ಕರ್ ಅವರೊಂದಿಗೆ ಡಿನ್ನರ್ ಮಾಡುತ್ತಿರುವ ಚಿತ್ರವನ್ನು ಸ್ವತಃ ಡೇನಿಯೆಲ್ ವ್ಯಾಟ್ ಅವರೇ ಟ್ವೀಟ್ ಮಾಡಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ 19 ವರ್ಷದ ಅರ್ಜುನ್ ತೆಂಡೂಲ್ಕರ್ ಭಾರತದ 19 ವರ್ಷದೊಳಗಿನವರ ತಂಡವನ್ನು ಪ್ರತಿನಿಧಿಸಿದ್ದಾರೆ.

LEAVE A REPLY

Please enter your comment!
Please enter your name here

14 + nineteen =