ಐಸಿಸಿ ವಿಶ್ವಕಪ್ 2019: ಆಸ್ಟ್ರೇಲಿಯಾ ತಂಡಕ್ಕೆ ಸ್ಮಿತ್, ವಾರ್ನರ್ ವಾಪಸ್

0
PC: BCCI

ಸಿಡ್ನಿ, ಏಪ್ರಿಲ್15: ಇಂಗ್ಲೆಂಡ್ನಲ್ಲಿ ಮೇ ತಿಂಗಳಲ್ಲಿ ಅರಂಭವಾಗಲಿರುವ ಐಸಿಸಿ ವಿಶ್ವಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ಎಡಗೈ ಓಪನರ್ ಡೇವಿಡ್ ವಾರ್ನರ್ ಮರಳಿದ್ದಾರೆ.

ಸ್ಮಿತ್ ಮತ್ತು ವಾರ್ನರ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಕೇಪ್ ಟೌನ್ ಬಾಲ್ ಟ್ಯಾಂಪರಿಂಗ್ ಆರೋಪಕ್ಕೆ ಗುರಿಯಾಗಿ ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.

ಭಾರತ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸರಣಿ ಜಯದತ್ತ ಮುನ್ನಡೆಸಿದ್ದ ಆ್ಯರೋನ್ ಫಿಂಚ್ ವಿಶ್ವಕಪ್ ಟೂರ್ನುಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. 2015ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.

PC: Cricket Australia

LEAVE A REPLY

Please enter your comment!
Please enter your name here

14 + seventeen =