ಕನ್ನಡಿಗ ಜೋಶಿ ಗರಡಿಯಲ್ಲಿ ಇತಿಹಾಸ ಬರೆದ ಬಾಂಗ್ಲಾ..!

0

ಢಾಕಾ, ಮೇ 19: ಬಾಂಗ್ಲಾದೇಶ ಕ್ರಿಕೆಟ್ ತಂಡ ಐರ್ಲೆಂಡ್ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಇದು ತ್ರಿಕೋನ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ಗೆದ್ದ ಮೊದಲ ಚಾಂಪಿಯನ್ ಷಿಪ್.

ಕರ್ನಾಟಕದ ಸ್ಪಿನ್ ಮಾಂತ್ರಿಕ ಸುನಿಲ್ ಜೋಶಿ ಬಾಂಗ್ಲಾದೇಶ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದಾರೆ. ಜೋಶಿ ಗರಡಿಯಲ್ಲಿ ಪಳಗಿರುವ ಬಾಂಗ್ಲಾದೇಶ ತಂಡ ಐರ್ಲೆಂಡ್ ತ್ರಿಕೋನ ಸರಣಿ ಗೆಲ್ಲುವ ಮೂಲಕ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಾಧನೆ ಮಾಡಿದೆ. ಆತಿಥೇಯ ಐರ್ಲೆಂಡ್ ತಂಡ ಟೂರ್ನಿಯಲ್ಲಿ ಭಾಗವಹಿಸಿದ್ದ 3ನೇ ತಂಡವಾಗಿದೆ.

LEAVE A REPLY

Please enter your comment!
Please enter your name here

4 × 3 =