ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಕನ್ನಡಿಗ ಬಿ.ಸಿ ರಮೇಶ್ ಕೋಚ್

0

ಬೆಂಗಳೂರು, ಜುಲೈ 4: ಕರ್ನಾಟಕದ ಕಬಡ್ಡಿ ದಿಗ್ಗಜ ಬಿ.ಸಿ ರಮೇಶ್ ಪ್ರೊ ಕಬಡ್ಡಿ ಲೀಗ್-7ನಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಭಾರತ ಕಬಡ್ಡಿ ತಂಡದ ಮಾಜಿ ನಾಯಕರೂ ಆಗಿರುವ ಬಿ.ಸಿ ರಮೇಶ್ ಅರ್ಜುನ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ಪ್ರೊ ಕಬಡ್ಡಿ ಲೀಗ್-6ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬೆಂಗಳೂರು ಬುಲ್ಸ್ ತಂಡದ ಸಹಾಯಕ ಕೋಚ್ ಆಗಿದ್ದ ರಮೇಶ್, ಅದಕ್ಕೂ ಹಿಂದಿನ ಸಾಲಿನಲ್ಲಿ ಪುಣೇರಿ ಪಲ್ಟನ್ ತಂಡದ ಪ್ರಧಾನ ಕೋಚ್ ಆಗಿದ್ದರು. ರಮೇಶ್ ಅವರ ಗರಡಿಯಲ್ಲಿ ಪುಣೇರಿ ಪಲ್ಟನ್ ತಂಡ ಪ್ಲೇ ಆಫ್ ಹಂತಕ್ಕೇರಿತ್ತು.

ಬೆಂಗಾಲ್ ವಾರಿಯರ್ಸ್ ತಂಡದಲ್ಲಿ ಈ ಬಾರಿ ಕರ್ನಾಟಕದ ನಾಲ್ವರು ಆಟಗಾರರಿದ್ದಾರೆ. ಈ ಹಿಂದೆ ಕನ್ನಡಿಗರೇ ಆಗಿರುವ ಜಗದೀಶ್ ಕುಂಬ್ಳೆ ಬೆಂಗಾಲ್ ವಾರಿಯರ್ಸ್ ತಂಡದ ಕೋಚ್ ಆಗಿದ್ದರು. ಬೆಂಗಾಲ್ ವಾರಿಯರ್ಸ್ ತಂಡದ ಈಗಾಗಲೇ ಬಿ.ಸಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಪ್ರೊ ಕಬಡ್ಡಿ ಲೀಗ್-7 ಟೂರ್ನಿಗೆ ಕೋಲ್ಕತ್ತದಲ್ಲಿ ತರಬೇತಿ ಆರಂಭಿಸಿದೆ.

LEAVE A REPLY

Please enter your comment!
Please enter your name here

1 × three =