ಮೇ 6ರಿಂದ ಮಹಿಳಾ ಟಿ20 ಚಾಲೆಂಜ್: ಜೈಪುರದಲ್ಲಿ ಮಹಿಳಾ ಐಪಿಎಲ್ ಹಬ್ಬ

0
PC: Twitter

ಬೆಂಗಳೂರು, ಏಪ್ರಿಲ್ 23: ಮಹಿಳಾ ಐಪಿಎಲ್ ಟೂರ್ನಿ ಎಂದೇ ಕರೆಯಲ್ಪಡುವ ಮಹಿಳಾ ಟಿ20 ಚಾಲೆಂಜ್ ಮೇ 6ರಿಂದ 11ರವರೆಗೆ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ 3 ತಂಡಗಳು ಭಾಗವಹಿಸಲಿದ್ದು, ಸೂಪರ್ ನೋವಾಸ್, ಟ್ರಯಲ್ ಬ್ರೇಜರ್ಸ್ ಮತ್ತು ವೆಲೋಸಿಟಿ ತಂಡಗಳು ಸೆಣಸಲಿವೆ. ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಟೈಲಿಷ್ ಎಡಗೈ ಓಪನರ್ ಸ್ಮೃತಿ ಮಂಧಾನ ಎರಡು ತಂಡಗಳನ್ನು ಮುನ್ನಡೆಸಲಿದ್ದು, 3ನೇ ತಂಡದ ನಾಯಕಿ ಯಾರು ಎಂಬುದು ಕುತೂಹಲ ಕೆರಳಿಸಿದೆ. ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ 3ನೇ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಕಳೆದ ವರ್ಷ ಸೂಪರ್ ನೋವಾಸ್, ಟ್ರಯಲ್ ಬ್ರೇಜರ್ಸ್ ತಂಡಗಳು ಏಕೈಕ ಪ್ರದರ್ಶನ ಪಂದ್ಯವಾಡಿದ್ದವು. ಈ ಬಾರಿ ಮತ್ತೊಂದು ತಂಡವನ್ನು ಸೇರಿಸಿಕೊಳ್ಳಲಾಗಿದೆ. ಮೂರು ತಂಡಗಳು ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳನ್ನಾಡಿದ್ದು, ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ತಲುಪಲಿವೆ. ಫೈನಲ್ ಪಂದ್ಯ ಮೇ 11ರಂದು ನಡೆಯಲಿದೆ. ಟೂರ್ನಿಯಲ್ಲಿ ಭಾರತೀಯ ಆಟಗಾರ್ತಿಯರ ಜೊತೆ ವಿದೇಶಿ ಆಟಗಾರ್ತಿಯರೂ ಆಡಲಿದ್ದಾರೆ.

ಮಹಿಳಾ ಟಿ20 ಚಾಲೆಂಜ್ ವೇಳಾಪಟ್ಟಿ

ಮೇ 6: ಸೂಪರ್ ನೋವಾಸ್ Vs ಟ್ರಯಲ್ ಬ್ಲೇಜರ್ಸ್ (ಸವಾನ್ ಮಾನ್ ಸಿಂಗ್ ಕ್ರೀಡಾಂಗಣ, ಜೈಪುರ)

ಮೇ 8: ಟ್ರಯಲ್ ಬ್ಲೇಜರ್ಸ್ Vs ವೆಲೊಸಿಟಿ (ಸವಾನ್ ಮಾನ್ ಸಿಂಗ್ ಕ್ರೀಡಾಂಗಣ, ಜೈಪುರ)

ಮೇ 9: ಸೂಪರ್ ನೋವಾಸ್ Vs ವೆಲೊಸಿಟಿ (ಸವಾನ್ ಮಾನ್ ಸಿಂಗ್ ಕ್ರೀಡಾಂಗಣ, ಜೈಪುರ)

ಮೇ 11: ಫೈನಲ್ (ಸವಾನ್ ಮಾನ್ ಸಿಂಗ್ ಕ್ರೀಡಾಂಗಣ, ಜೈಪುರ)

LEAVE A REPLY

Please enter your comment!
Please enter your name here

five × 1 =