ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತದ ವನಿತೆಯರು

0
PC: twitter

ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಚಾಂಪಿಯನ್ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ಗೆದ್ದುಕೊಂಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸರಣಿಯ 3ನೇ ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು. ಈ ಪಂದ್ಯ ಸೋತರೂ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿದ್ದ ಮಿಥಾಲಿ ರಾಜ್ ಬಳಗ ಸರಣಿ ತನ್ನದಾಗಿಸಿಕೊಂಡಿತು. ಇದು ಭಾರತ ತಂಡ ಗೆದ್ದ ಸತತ 2ನೇ ಏಕದಿನ ಸರಣಿ. ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲೂ ಭಾರತದ ವನಿತೆಯರು ಏಕದಿನ ಸರಣಿ ಗೆದ್ದಿದ್ದರು.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆಲ್ಲುವ ಮೂಲಕ 2017ರಲ್ಲಿ ಇಂಗ್ಲೆಂಡ್ ನಲ್ಲೇ ನಡೆದ ಐಸಿಸಿ ವಿಶ್ವಕಪ್ ಫೈನಲ್ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು. ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಕೇವಲ 9 ರನ್ ಗಳಿಂದ ಸೋಲು ಕಂಡಿತ್ತು.

Brief scores

India Women: 205/8 in 50 overs (Smriti Mandhana 66, Punam Raut 56, Deepti Sharma 27 not out, Shikha Pandey 26; KH Brunt 5/28) lost to Engalnd Women: 208/8 in 48.5 overs (DN Wyatt 56, HC Knight 47, GA Elwiss 33 not out; Julan Goswami 3/41, Shikha Pandey 2/34, Poonam Yadav 2/41) by 2 wickets.

LEAVE A REPLY

Please enter your comment!
Please enter your name here

thirteen + 3 =