ಬೆಂಗಳೂರು ವಿವಿ ಕ್ರಿಕೆಟ್ ಟೂರ್ನಿ: ಎಂಇಎಸ್ ಕಾಲೇಜು ಚಾಂಪಿಯನ್ಸ್

0

ಬೆಂಗಳೂರು, ಮಾರ್ಚ್ 5: ಬೆಂಗಳೂರು ಕೇಂದ್ರ ಸೆಂಟ್ರಲ್ ಯುನಿವರ್ಸಿಟಿ ಅಂತರ್ ಕಾಲೇಜು ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಎಂಇಎಸ್ ಆರ್ಟ್ಸ್, ಕಾಮರ್ಸ್ ಮತ್ತು ಸೈನ್ಸ್ ಡಿಗ್ರಿ ಕಾಲೇಜು ಚಾಂಪಿಯನ್ ಪಟ್ಟಕ್ಕೇರಿದೆ.

ಬೆಂಗಳೂರು ಕೇಂದ್ರ ಸೆಂಟ್ರಲ್ ಯುನಿವರ್ಸಿಟಿಯ ದೈಹಿಕ ಶಿಕ್ಷಣ ನಿರ್ದೇಶಕರು ಆಯೋಜಿಸಿದ್ದ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಒಟ್ಟು  20 ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯದಲ್ಲಿ ಎಂಇಎಸ್ ಕಾಲೇಜು ತಂಡ ಸಿಂಧಿ ಡಿಗ್ರಿ ಕಾಲೇಜು ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸಿಂಧಿ ಕಾಲೇಜು ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 105 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಎಂಇಎಸ್ ಕಾಲೇಜು ತಂಡ 19 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಜಯಭೇರಿ ಬಾರಿಸಿತು. ಎಂಇಎಸ್ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಜಯನಗರದ ಎಸ್ಎಸ್ಎಂಆರ್ ವಿ ಕಾಲೇಜು ಹಾಗೂ ಸೆಮಿಫೈನಲ್ ನಲ್ಲಿ ರಾಜಾಜಿನಗರದ ಕೆಎಲ್ಇ ಕಾಲೇಜು ತಂಡವನ್ನು ಸೋಲಿಸಿ ಫೈನಲ್ ತಲುಪಿತ್ತು.

LEAVE A REPLY

Please enter your comment!
Please enter your name here

3 + two =