ಬಿಐಸಿಸಿ ಇನ್ಫಿನಿಟಿ ಕ್ರಿಕೆಟ್ ಗ್ರೌಂಡ್ಸ್ ಅಕ್ಟೋಬರ್ 10ಕ್ಕೆ ಉದ್ಘಾಟನೆ

0

ಬೆಂಗಳೂರು, ಸಪ್ಟೆಂಬರ್ 29: ಬೆಂಗಳೂರು ಇನ್’ಡೋರ್ ಕ್ರಿಕೆಟ್ ಕ್ಲಬ್ (ಬಿಐಸಿಸಿ) ತನ್ನ ಅತ್ಯಾಧುನಿಕ ಕ್ರಿಕೆಟ್ ಸೌಲಭ್ಯಗಳಿಂದ ಈಗಾಗಲೇ ಕ್ರಿಕೆಟ್ ವಲಯದಲ್ಲಿ ಗಮನ ಸೆಳೆದಿದೆ. ಕ್ರಿಕೆಟ್ ಅಭ್ಯಾಸಕ್ಕೆ ರೋಬೊ ಬೌಲಿಂಗ್ ಮಷಿನ್, ಅತ್ಯುತ್ತಮ ಒಳಾಂಗಣ ಸೌಲಭ್ಯಗಳನ್ನು ಹೊಂದಿರುವ ಬಿಐಸಿಸಿ ಇದೀಗ ತನ್ನದೇ ಆದ ಎರಡು ಕ್ರೀಡಾಂಗಣಗಳನ್ನು ಪರಿಚಯಿಸಲಿದೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನೈಸ್ ಜಂಕ್ಷನ್’ನ ಸೀಗೇಹಳ್ಳಿ ಗೇಟ್’ನಲ್ಲಿ ಬಿಐಸಿಸಿಯ ಎರಡು ಅಂತರಾಷ್ಚ್ರೀಯ ಗುಣಮಟ್ಟದ ಮೈದಾನಗಳು ಸಿದ್ಧವಾಗಿವೆ. ಒಟ್ಟು 12 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಎರಡು ಕ್ರೀಡಾಂಗಣಗಳಲ್ಲಿ 5 ಟರ್ಫ್ ಪಿಚ್’ಗಳನ್ನು ನಿರ್ಮಿಸಲಾಗಿದೆ. ಪ್ರತಿ ಕ್ರೀಡಾಂಗಣದ ವಿಸ್ತೀರ್ಣ 73 ಮೀಟರ್ ರೌಂಡ್ ರೇಡಿಯಸ್’ನ ಬೌಂಡರಿಯಿದ್ದು, ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿವೆ. ಅಲ್ಲದೆ ಕ್ರೀಡಾಂಗಣಕ್ಕೆ ಪೆವಿಲಿಯನ್ ಕೂಡ ನಿರ್ಮಿಸಲಾಗಿದ್ದು 100 ಜನರು ಕುಳಿತು ಪಂದ್ಯ ವೀಕ್ಷಿಸಬಹುದು. 40 ಮಂದಿಯ ವಾಸ್ತವ್ಯಕ್ಕೂ ವ್ಯವಸ್ಥೆಯಿದೆ. ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಎರಡು ಟರ್ಫ್ ಪಿಚ್’ಗಳು ಹಾಗೂ ಒಂದು ಆಸ್ಟ್ರೋಟರ್ಫ್ ಪಿಚ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಐಸಿಸಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಗುರುಚರಣ್ ಗೌಡ ಸ್ಪೋರ್ಟ್ಸ್ ಸೀಮ್.ಕಾಮ್’ಗೆ ತಿಳಿಸಿದ್ದಾರೆ.

ಯಾವುದೇ ಮಟ್ಟದ ಕ್ರಿಕೆಟ್’ಗೆ ಕ್ರೀಡಾಂಗಣಗಳು ಲಭ್ಯವಿದ್ದು, ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದೆ ಎಂದು ಗುರುಚರಣ್ ಗೌಡ ಹೇಳಿದ್ದಾರೆ. ಕ್ರೀಡಾಂಗಣದ ಬುಕ್ಕಿಂಗ್’ಗಾಗಿ 9900906238 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

 

LEAVE A REPLY

Please enter your comment!
Please enter your name here

5 + 1 =