ಕೆಕೆಆರ್ ತಂಡದಿಂದ ಕೊಡಗಿನ ಕಲಿ ಕಾರಿಯಪ್ಪಗೆ ಬುಲಾವ್..!

0

ಕೋಲ್ಕತ್ತ, ಮಾರ್ಚ್ 17: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಕರ್ನಾಟಕ ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕರ್ನಾಟಕದ ಮಿಸ್ಟರಿ ಸ್ಪಿನ್ನರ್ ಕೆ.ಸಿ ಕಾರಿಯಪ್ಪ ಅವರಿಗೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಬುಲಾವ್ ಬಂದಿದೆ.

ಹೀಗಾಗಿ ಇಂದೋರ್ ನಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ಮುಷ್ತಾಕ್ ಅಲಿ ಫೈನಲ್ ಗೆದ್ದ ಮರುದಿನವೇ ಕಾರಿಯಪ್ಪ ಕೋಲ್ಕತ್ತಗೆ ತೆರಳಿದ್ದು, ಕೆಕೆಅರ್ ತಂಡ ಸೇರಿಕೊಂಡಿದ್ದಾರೆ. 2019ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿದ್ದ ಕಾರಿಯಪ್ಪ 5.02ರ ಉತ್ತಮ ಸರಾಸರಿಯಲ್ಲಿ 10 ವಿಕೆಟ್ಸ್ ಪಡೆದು ಮಿಂಚಿದ್ದರು. 11 ಪಂದ್ಯಗಳಲ್ಲಿ ಒಟ್ಟು 41 ಓವರ್ಸ್ ಬೌಲಿಂಗ್ ಮಾಡಿದ್ದ ಕಾರಿಯಪ್ಪ 206 ರನ್ ನೀಡಿದ್ದರು.

ಕೊಡಗಿನ ಕಲಿ ಕೆಸಿ ಕಾರಿಯಪ್ಪ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದರು. ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು. ಆದರೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಕಾರಿಯಪ್ಪ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಆದರೆ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬೆನ್ನಲ್ಲೇ ಕೆಕೆಆರ್ ತಂಡದಿಂದ ಬುಲಾವ್ ಬಂದಿದೆ. ಕೆಕೆಆರ್ ತಂಡದಲ್ಲಿ ಯಾರಾದ್ರು ಗಾಯಗೊಂಡ್ರೆ ಅವರ ಬದಲು ಕಾರಿಯಪ್ಪ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

12 − two =