ಸಿಸಿಎಲ್ ಟಿ10: ಪಂಜಾಬ್ ವಿರುದ್ಧದ ಜಯದೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ಶುಭಾರಂಭ

0

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟಿ10 ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಪಂಜಾಬ್ ಡಿ ಶೆರ್ ವಿರುದ್ಧದ ಸುಲಭ ಜಯದೊಂದಿಗೆ ಶುಭಾರಂಭ ಮಾಡಿದೆ.

ಚಂಡೀಗಢದಲ್ಲಿ ಗುರುವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಪಂಜಾಬ್ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿತು. ಬಾಲಿವುಡ್ ನಟ ಸೋನು ಸೂದ್ ನಾಯಕತ್ವದ ಪಂಜಾಬ್ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 10 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 82 ರನ್ ಗಳ ಸವಾಲಿನ ಮೊತ್ತ ಕಲೆ ಹಾಕಿತು. ತಂಡದ ಪರ ರಾಜೀವ್ 26 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರೆ, ನಾಯಕ ಸೋನು ಸೂದ್ 16 ಎಸೆತಗಳಲ್ಲಿ 29 ರನ್ ಸಿಡಿಸಿದರು.

ನಂತರ ಗುರಿ ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ ತಂಡ 5.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ನಾಯಕ ಪ್ರದೀಪ್ 18 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ಪಂಜಾಬ್ ತಂಡ 37 ರನ್ ಗಳನ್ನು ಎಕ್ಸ್ ಟ್ರಾ ರೂಪದಲ್ಲಿ ನೀಡಿತು. ಕರ್ನಾಟಕ ಬುಲ್ಡೋಜರ್ಸ್ ಇನ್ನಿಂಗ್ಸ್ ನಲ್ಲಿ ಎಕ್ಸ್ ಟ್ರಾ ರನ್ ಗಳೇ ಟಾಪ್ ಸ್ಕೋರರ್ ಆಗಿದ್ದು ವಿಶೇಷ. ನಾಳೆ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಅಕ್ಕಿನೇನಿ ಅಖಿಲ್ ನಾಯಕತ್ವದ ತೆಲುಗು ವಾರಿಯರ್ಸ್ ತಂಡವನ್ನು ಎದುರಿಸಲಿದೆ.

Brief scores

Punjab De Sher: 82/4 in 10 overs (Rajiv 33 not out, Sonu Sood 29; Jayaram Karthik 1/5, Petrol Prasanna 1/16, Chandan 1/22) lost to Karnataka Bulldozers: 84/1 in 5.4 overs (Pradeep 32 not out, Krishna 14; Gill 1/21) by 9 wickets.

LEAVE A REPLY

Please enter your comment!
Please enter your name here

9 − 7 =