ಸಿಸಿಎಲ್ ಟಿ10: ಫೈನಲ್ ಆಡದೆ ಚಾಂಪಿಯನ್ ಆದ ಮುಂಬೈ.. ಕರ್ನಾಟಕ ಬುಲ್ಡೋಜರ್ಸ್ ರನ್ನರ್ಸ್ ಅಪ್..!

0

ಚಂಡೀಗಢ, ಮಾರ್ಚ್ 10: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟಿ10 ಟೂರ್ನಿಯಲ್ಲಿ ಮುಂಬೈ ಹೀರೊಸ್ ತಂಡ ಫೈನಲ್ ಪಂದ್ಯವನ್ನೇ ಆಡದೆ ಚಾಂಪಿಯನ್ ಆಗಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ರನ್ನರ್ಸ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

ಸಿಸಿಎಲ್ ಟಿ10: ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ ಹೀರೋಸ್ ತಂಡ

ಚಂಡೀಗಢದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿತು. ಹೀಗಾಗಿ ಲೀಗ್ ಹಂತದ ಪ್ರದರ್ಶನದ ಆಧಾರದಲ್ಲಿ ಚಾಂಪಿಯನ್ ಹಾಗೂ ರನ್ನರ್ಸ್ ಆಪ್ ತಂಡಗಳನ್ನು ನಿರ್ಧರಿಸಲಾಯಿತು. ಮುಂಬೈ ರೈನೋಸ್ ತಂಡ ಲೀಗ್ ಹಂತದಲ್ಲಿ ಆಡಿದ್ದ ಮೂರೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಕರ್ನಾಟಕ ಬುಲ್ಡೋಜರ್ಸ್ ತಂಡ 3 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಒಂದು ಪಂದ್ಯ ಸೋತು 4 ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿತ್ತು.

ಸಿಸಿಎಲ್ ಟಿ10 ಟೂರ್ನಿಯ ಲೀಗ್ ಹಂತದ ಪಂದ್ಯಗಳ ಪಾಯಿಂಟ್ಸ್ ಪಟ್ಟಿ ಇಲ್ಲಿದೆ ನೋಡಿ.

LEAVE A REPLY

Please enter your comment!
Please enter your name here

1 × five =