ಐಪಿಎಲ್: ಸಿಕ್ಸರ್ಸ್ ‘ತ್ರಿಶತಕ’ ಸಿಡಿಸಿದ ಯೂನಿವರ್ಸಲ್ ಬಾಸ್..!

0
PC: Kings XI Punjab/Twitter

ಮೊಹಾಲಿ, ಮಾರ್ಚ್ 30: ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸಿಕ್ಸರ್ ಗಳ ತ್ರಿಶತಕ ಬಾರಿಸಿದ್ದಾರೆ.

ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ತಮ್ಮ 115ನೇ ಐಪಿಎಲ್ ಪಂದ್ಯದಲ್ಲಿ 300 ಸಿಕ್ಸರ್ಸ್ ಪೂರ್ತಿಗೊಳಿಸಿದ್ದಾರೆ. ಅಲ್ಲದೆ ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೊಟ್ಟ ಮೊದಲ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ 39 ವರ್ಷದ ಗೇಲ್, ಮೊಹಾಲಿಯಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 2ನೇ ಸಿಕ್ಸರ್ ಬಾರಿಸಿದ್ದ ವೇಳೆ ಐಪಿಎಲ್ ನಲ್ಲಿ 300 ಸಿಕ್ಸರ್ಸ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ಸ್ ಸಿಡಿಸಿದವರ ಸಾಲಿನಲ್ಲಿ 2ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜಪ್ಸ್ ಬೆಂಗಳೂರು ತಂಡದ ಎಬಿ ಡಿ’ವಿಲಿಯರ್ಸ್ 143 ಪಂದ್ಯಗಳಲ್ಲಿ 192 ಸಿಕ್ಸರ್ಸ್ ಸಿಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿಲಬ್ಬರದ ಆಟವಾಡಿದ ಗೇಲ್ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಸ್ ನೆರವಿನಿಂದ 40 ರನ್ ಸಿಡಿಸಿದರು.

ಐಪಿಎಲ್ ನಲ್ಲಿ ಒಟ್ಟು 115 ಪಂದ್ಯಗಳನ್ನಾಡಿರುವ ಗೇಲ್ 41.33ರ ಸರಾಸರಿಯಲ್ಲಿ 6 ಶತಕ, 25 ಅರ್ಧಶತಕಗಳ ಸಹಿತ 2734 ಎಸೆತಗಳನ್ನೆದುರಿಸಿ 4133 ರನ್ ಗಳಿಸಿದ್ದಾರೆ. 337 ಬೌಂಡರಿಗಳನ್ನು ಬಾರಿಸಿರುವ ಕ್ರಿಸ್ ಗೇಲ್ 302 ಸಿಕ್ಸರ್ಸ್ ಸಿಡಿಸಿದ್ದಾರೆ.

ಐಪಿಎಲ್ ನಲ್ಲಿ ಕ್ರಿಸ್ ಗೇಲ್ ಕೋಲ್ಕತ್ತ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಪರ ಆಡಿದ್ದಾರೆ.

ಐಪಿಎಲ್: ಅತಿ ಹೆಚ್ಚು ಸಿಕ್ಸರ್ಸ್ ಸಿಡಿಸಿದವರ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

eleven + 18 =