4 ಪಂದ್ಯಗಳಲ್ಲಿ 39 ಸಿಕ್ಸರ್ಸ್… ಇದು ಕ್ರಿಸ್ ಗೇಲ್ ಸ್ಪೆಷಲ್..!

0
PC: Twitter

ಸೈಂಟ್ ಲೂಸಿಯಾ, ಮಾರ್ಚ್ 3: ವೆಸ್ಟ್ ಇಂಡೀಸ್ ತಂಡದ ದೈತ್ಯ ದಾಂಡಿಗ ಕ್ರಿಸ್ ಗೇಲ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ 4 ಇನ್ನಿಂಗ್ಸ್ ಗಳಲ್ಲಿ 39 ಸಿಕ್ಸರ್ಸ್ ಸಿಡಿಸಿ ಅಬ್ಬರಿಸಿದ್ದಾರೆ.

ಸೈಂಟ್ ಲೂಸಿಯಾದಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿಗಳು ಮತ್ತು 9 ಸಿಕ್ಸರ್ಸ್ ನೆರವಿನಿಂದ 77 ರನ್ ಸಿಡಿಸಿ ವೆಸ್ಟ್ ಇಂಡೀಸ್ ಗೆಲುವಿಗೆ ಕಾರಣರಾದರು. ಈ ಮೂಲಕ 39ನೇ ವರ್ಷದಲ್ಲೂ ತಮ್ಮ ಸಾಮರ್ಥ್ಯ ಕುಂದಿಲ್ಲ ಎಂಬುದನ್ನು ನಿರೂಪಿಸಿದರು.

ಈ ಸರಣಿಯಲ್ಲಿ ಅಕ್ಷರಶಃ ಅಬ್ಬರಿಸಿರುವ ಕ್ರಿಸ್ ಗೇಲ್ 4 ಇನ್ನಿಂಗ್ಸ್ ಗಳಲ್ಲಿ 2ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 316 ಎಸೆತಗಳಲ್ಲಿ 424 ರನ್ ಸಿಡಿಸಿದ್ದಾರೆ. ಇದರಲ್ಲಿ 39 ಸಿಕ್ಸರ್ಸ್ ಹಾಗೂ 20 ಬೌಂಡರಿಗಳು ಒಳಗೊಂಡಿವೆ. ಈ ಮೂಲಕ ಮಾರ್ಚ್ 23ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

3 × 1 =