ಕ್ರಿಕೆಟ್: ಪಾಂಡಿಚೇರಿ ಕೋಚ್ ಹುದ್ದೆಗೆ ಜ್ಯಾಕ್ ದಿಢೀರ್ ರಾಜೀನಾಮೆ..!

0
J. Arun Kumar. File photo

ಬೆಂಗಳೂರು, ಫೆಬ್ರವರಿ 13: ಕರ್ನಾಟಕದ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಜೆ.ಅರುಣ್ ಕುಮಾರ್ ಪಾಂಡಿಚೇರಿ ಕ್ರಿಕೆಟ್ ತಂಡದ ತರಬೇತುದಾರನ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಪಾಂಡಿಚೇರಿ ತಂಡ ಸದ್ಯ ರಣಜಿ ಟ್ರೋಫಿ ಲೀಗ್ ಹಂತದಲ್ಲಿ ತನ್ನ ಅಂತಿಮ ಪಂದ್ಯವಾಡುತ್ತಿದ್ದು, ಟೂರ್ನಿಯ ಮಧ್ಯದಲ್ಲೇ ಜೆ.ಆರುಣ್ ಕುಮಾರ್ ಕೋಚ್ ಹುದ್ದೆ ತೊರೆದಿದ್ದಾರೆ.

ತಂಡದ ಆಯ್ಕೆಯಲ್ಲಿ ಪಾಂಡಿಚೇರಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ನಿರಂತರವಾಗಿ ಹಸ್ತಕ್ಷೇಪ ನಡೆಸುತ್ತಿದ್ದುದರಿಂದ ಬೇಸತ್ತು ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಜ್ಯಾಕ್ ಟ್ವೀಟ್ ಮಾಡಿದ್ದಾರೆ.

“ನಾನು ಕೋಚ್ ಹುದ್ದೆ ತೊರೆಯಲು ಆರೋಗ್ಯ ಸಮಸ್ಯೆ ಕಾರಣ ಎಂಬ ವರದಿ ಸುಳ್ಳು. ಕ್ರಿಕೆಟ್ ಸಂಸ್ದೆಯ ಪದಾಧಿಕಾರಿಯೊಬ್ಬರು ತಂಡಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿರಂತರವಾಗಿ ಹಸ್ತಕ್ಷೇಪ ನಡೆಸುತ್ತಿದ್ದರು. ಇದನ್ನು ವಿರೋಧಿಸಿ ರಾಜೀನಾಮೆ ನೀಡಿದ್ದೇನೆ. ಅಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡುವುದು ಕಷ್ಟವಾಗಿತ್ತು” ಎಂದು ಜ್ಯಾಕ್ ಟ್ವೀಟ್ ಮಾಡಿದ್ದಾರೆ.

 

 

 

ಕಳೆದ ವರ್ಷ ಪಾಂಡಿಚೇರಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಜೆ.ಅರುಣ್ ಕುಮಾರ್ ಅದಕ್ಕೂ ಮೊದಲು ಕರ್ನಾಟಕ ತಂಡದ ಕೋಚ್ ಆಗಿದ್ದರು. ಜ್ಯಾಕ್ ತರಬೇತಿಯ ಅವಧಿಯಲ್ಲೇ ಕರ್ನಾಟಕ ತಂಡ 2013-14 ಹಾಗೂ 2014-15ನೇ ಸಾಲಿನಲ್ಲಿ ಸತತವಾಗಿ ಎರಡೆರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತ್ತು. ಜ್ಯಾಕ್ ಕೋಚಿಂಗ್”ನಲ್ಲಿ ಪಾಂಡಿಚೇರಿ ತಂಡವೂ ಉತ್ತಮ ಸಾಧನೆ ತೋರಿದ್ದು, ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು. ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಂಡಿಚೇರಿ ತಂಡ ಪ್ಲೇಟ್ ಗುಂಪಿನಲ್ಲಿ 8 ಪಂದ್ಯಗಳನ್ನಾಡಿ 6 ಗೆಲುವುಗಳೊಂದಿಗೆ 41 ಅಂಕ ಸಂಪಾದಿಸಿ ಉತ್ತಮ ಪ್ರದರ್ಶನ ತೋರಿದೆ.

LEAVE A REPLY

Please enter your comment!
Please enter your name here

eight − two =