Test.., ODI.., T20I.., IPL ಶತಕ… ಇದು ಕನ್ನಡಿಗನ ಅಪರೂಪದ ಸಾಧನೆ

0
PC: IPL/Twitter

ಮುಂಬೈ, ಏಪ್ರಿಲ್ 10: ಕರ್ನಾಟಕದ ಸ್ಟೈಲಿಷ್ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಟೆಸ್ಟ್, ಏಕದಿನ, ಟಿ20 ಅಂತರಾಷ್ಟ್ರೀಯ ಮತ್ತು ಐಪಿಎಲ್ ನಲ್ಲಿ ಶತಕ ಬಾರಿಸಿದ ವಿಶೇಷ ಸಾಧನೆ ಮಾಡಿದ್ದಾರೆ ರಾಹುಲ್.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ರಾಹುಲ್, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸ ಕೇವಲ 63 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಇದು ಐಪಿಎಲ್ ಟೂರ್ನಿಯಲ್ಲಿ ರಾಹುಲ್ ಗಳಿಸಿದ ಚೊಚ್ಚಲ ಶತಕ. ರಾಹುಲ್ ಅವರ ಶತಕದ ಇನ್ನಿಂಗ್ಸ್ ನಲ್ಲಿ 6 ಬೌಂಡರಿಗಳು ಮತ್ತು 6 ಸಿಕ್ಸರ್ಸ್ ಒಳಗೊಂಡಿದ್ದವು. ಹಾರ್ದಿಕ್ ಪಾಂಡ್ಯ ಎಸೆದ ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ 3 ಸಿಕ್ಸರ್ಸ್ ಸಹಿತ 22 ರನ್ ದೋಚಿದ ರಾಹುಲ್, ಭರ್ಜರಿ ಶತಕ ಸಿಡಿಸಿದರು. ಐಪಿಎಲ್ ನಲ್ಲ್ಲಿ ಶತಕ ಬಾರಿಸಿದ ಕರ್ನಾಟಕದ 2ನೇ ಆಟಗಾರನೆಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ.

2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್-2 ಟೂರ್ನಿಯಲ್ಲಿ ಮನೀಶ್ ಪಾಂಡೆ ರಾಯಲ್ ಚಾಲೆಂಜರ್ಸ್ ಪರ ಭರ್ಜರಿ ಶತಕ ಸಿಡಿಸಿದ್ದರು.

ಏಪ್ರಿಲ್ 18ರಂದು 27ನೇ ವರ್ಷಕ್ಕೆ ಕಾಲಿಡಲಿರುವ ರಾಹುಲ್ ಟೆಸ್ಟ್ ಕ್ರಿಕೆಟ್ ನಲ್ಲಿ 5 ಶತಕ, ಏಕದಿನ ಕ್ರಿಕೆಟ್ ನಲ್ಲಿ ಒಂದು ಶತಕ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 2 ಶತಕ ಹಾಗೂ ಐಪಿಎಲ್ ನಲ್ಲಿ ಇದೀಗ ಚೊಚ್ಚಲ ಶತಕ ಸಿಡಿಸಿದ್ದಾರೆ.

LEAVE A REPLY

Please enter your comment!
Please enter your name here

three × 4 =