ವಿಶ್ವಕಪ್ ಅಖಾಡದಿಂದ ಅಭಿಷೇಕ್ ‘ಅಮರ್’ ಚಿತ್ರಕ್ಕೆ ಶುಭ ಹಾರೈಸಿದ ರಾಹುಲ್..!

0

ಲಂಡನ್, ಮೇ 31: ಕರ್ನಾಟಕದ ಸ್ಟೈಲಿಷ್ ಕ್ರಿಕೆಟಿಗ ಕೆ.ಎಲ್ ರಾಹುಲ್ ಸದ್ಯ ಇಂಗ್ಲೆಂಡ್ ನಲ್ಲಿದ್ದು, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿರುವ ಕನ್ನಡಿಗ ರಾಹುಲ್ ವಿಶ್ವಕಪ್ ಪದಾರ್ಪಣೆಯನ್ನು ಎದುರು ನೋಡುತ್ತಿದ್ದಾರೆ. ಜೂನ್ 5ರಂದು ಸೌಥಾಂಪ್ಟನ್ ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಆ ಪಂದ್ಯ ರಾಹುಲ್ ಅವರಿಗೆ ಮೊದಲ ವಿಶ್ವಕಪ್ ಪಂದ್ಯವಾಗಲಿದೆ.

ವಿಶ್ವಕಪ್ ಗೆ ಸಜ್ಜಾಗುತ್ತಿರುವ ರಾಹುಲ್ ತಮ್ಮ ಆತ್ಮೀಯ ಸ್ನೇಹಿತ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಮೊದಲ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ ಮೊದಲ ಚಿತ್ರ ‘ಅಮರ್’ ಶುಕ್ರವಾರ ಬಿಡುಗಡೆಯಾಗಿದ್ದು, ಅಭಿಗೆ ಮತ್ತು ಸಿನಿಮಾಗೆ ಒಳ್ಳೆಯದಾಗಲಿ, ಸಿನಿಮಾ ಯಶಸ್ಸು ಕಾಣಲಿ ಎಂದು ರಾಹುಲ್ ಶುಭ ಹಾರೈಸಿದ್ದಾರೆ. ಕೆ.ಎಲ್ ರಾಹುಲ್ ಲಂಡನ್ ನಿಂದ ಕಳುಹಿಸಿರುವ ವೀಡಿಯೊ ಸಂದೇಶವನ್ನು ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

‘’ಹಾಯ್ ಅಭಿ, ನಿನ್ನ ಸಾಧನೆಗೆ ತುಂಬಾ ಖುಷಿ ಮತ್ತು ಹೆಮ್ಮೆಯಿದೆ. ನನ್ನ ಪ್ರೀತಿ ಮತ್ತು ಶುಭ ಹಾರೈಕೆಗಳು ನಿನ್ನೊಂದಿಗಿರುತ್ತವೆ. ಅಭಿಷೇಕ್ ಅಂಬರೀಶ್ ಅವರ ಮೊದಲ ಚಿತ್ರ ಅಮರ್ ಇವತ್ತು ರಿಲೀಸ್ ಆಗ್ತಾ ಇದೆ. ಸಿನಿಮಾಗೆ ನೀನು ಎಷ್ಟು ಪರಿಶ್ರಮ ಪಟ್ಟಿದ್ದೀಯಾ ಎಂಬುದು ನನಗೆ ಗೊತ್ತು. ನಿನಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ’’

ಕೆ.ಎಲ್ ರಾಹುಲ್, ಭಾರತ ಕ್ರಿಕೆಟ್ ತಂಡದ ಆಟಗಾರ.

LEAVE A REPLY

Please enter your comment!
Please enter your name here

two × 3 =