ಐಸಿಸಿ ವಿಶ್ವಕಪ್: ಕಾಮೆಂಟರಿಗೆ ದಾವಣಗೆರೆ ಎಕ್ಸ್’ಪ್ರೆಸ್ ಪದಾರ್ಪಣೆ..!

0

ಮುಂಬೈ, ಜೂನ್ 9: ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ನಾಯಕ, ದಾವಣಗೆರೆ ಎಕ್ಸ್’ಪ್ರೆಸ್ ಖ್ಯಾತಿಯ ಆರ್.ವಿನಯ್ ಕುಮಾರ್ ಕ್ರಿಕೆಟ್ ವೀಕ್ಷಕ ವಿವರಣೆಗೆ ಪದಾರ್ಪಣೆ ಮಾಡಿದ್ದಾರೆ.

ಇಂಗ್ಲೆಂಡ್ ನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯಕ್ಕೆ ಕನ್ನಡ ಕಾಮೆಂಟೇಟರ್ ಆಗಿ ವಿನಯ್ ವೀಕ್ಷಕ ವಿವರಣೆಗೆ ಕಾಲಿಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಕರ್ನಾಟಕದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್, ಸುಜಿತ್ ಸೋಮಸುಂದರ್, ಕೆ.ಜಸ್ವಂತ್, ಬಾಲಚಂದ್ರ ಅಖಿಲ್, ಜಿ.ಕೆ ಅನಿಲ್ ಕುಮಾರ್, ಶ್ರೀನಿವಾಸಮೂರ್ತಿ ವಿಶ್ವಕಪ್ ಪಂದ್ಯಗಳಿಗೆ ವಿಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಾಲಿಗೆ ವಿನಯ್ ಕುಮಾರ್ ಕೂಡ ಸೇರ್ಪಡೆಗೊಂಡಿದ್ದಾರೆ. ಮುಂಬೈನಲ್ಲಿರುವ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೊದಲ್ಲಿ ವಿಶ್ವಕಪ್ ಪಂದ್ಯಗಳಿಗೆ ಕನ್ನಡ ಕಾಮೆಂಟರಿ ಮಾಡಲಾಗುತ್ತಿದೆ.

PC: Star Sports

ಕರ್ನಾಟಕದ ದಿಗ್ಗಜ ಕ್ರಿಕೆಟಿಗರಾಗಿರುವ ವಿನಯ್ ಕುಮಾರ್ ತಮ್ಮ ನಾಯಕತ್ವದಲ್ಲಿ ರಾಜ್ಯ ತಂಡಕ್ಕೆ 2013-14 ಮತ್ತು 2014-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ಸ್ ಪಡೆದ ವೇಗದ ಬೌಲರ್ ಗಳ ಸಾಲಿನಲ್ಲಿ ದಾವಣಗೆರೆ ಎಕ್ಸ್’ಪ್ರೆಸ್ ವಿನಯ್ ಕುಮಾರ್ ಮೊದಲ ಸಾಲಿನಲ್ಲಿದ್ದಾರೆ.

LEAVE A REPLY

Please enter your comment!
Please enter your name here

five + nineteen =