ಐಪಿಎಲ್: ಡೆಲ್ಲಿ ಕ್ಯಾಪಿಕಲ್ಸ್ ತಂಡದ ಹೊಸ ಜರ್ಸಿಯಲ್ಲಿ ಶ್ರೇಯಸ್ ಅಯ್ಯರ್ ಮಿಂಚಿಂಗ್..!

0

ಐಪಿಎಲ್-12 ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಡೆಲ್ಲಿ ಡೇರ್ ಡೆವಿಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎಂಬ ಹೊಸ ಹೆಸರಲ್ಲಿ ಹೊಸತನದೊಂದಿಗೆ ಆಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಜರ್ಸಿ ಬಿಡುಗಡೆಯಾಗಿದ್ದು, ತಂಡದ ನಾಯಕ ಶ್ರೇಯಸ್ ಅಯ್ಯರ್ ಹೊಸ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. 2008ರಿಂದಲೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಡೆಲ್ಲಿ ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ತಂಡದ ಮಾಲೀಕತ್ವ ಬದಲಾಗಿರುವ ಹಿನ್ನೆಲೆಯಲ್ಲಿ ತಂಡದ ಹೆಸರೂ ಕೂಡ ಬದಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಪೃಥ್ವಿ ಶಾ ಅವರಂತಹ ಯುವ ಆಟಗಾರರಿದ್ದು, ಲೋಕಲ್ ಹೀರೊ ಶಿಖರ್ ಧವನ್ ಹೈದರಾಬಾದ್ ತಂಡದಿಂದ ತವರು ತಂಡಕ್ಕೆ ಮರಳಿದ್ದಾರೆ. 

LEAVE A REPLY

Please enter your comment!
Please enter your name here

fourteen + sixteen =