ದೇವಧರ್ ಟ್ರೋಫಿಗೆ ತಂಡ ಪ್ರಕಟ: ಕರ್ನಾಟಕದ ತ್ರಿಮೂರ್ತಿಗಳಿಗೆ ಸ್ಥಾನ

0

ಬೆಂಗಳೂರು, ಅಕ್ಟೋಬರ್ 24: ದೇವಧರ್ ಟ್ರೋಫಿ ಏಕದಿನ ಟೂರ್ನಿಗೆ ಭಾರತ , ಭಾರತ ಬಿ ಹಾಗೂ ಭಾರತ ಸಿ ತಂಡಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 10 ಪಂದ್ಯಗಳಿಂದ 598 ರನ್ ಕಲೆ ಹಾಕಿರುವ ರಾಜ್ಯದ ಯುವ ಎಡಗೈ ಓಪನರ್ ದೇವದತ್ ಪಡಿಕಲ್ ಭಾರತ ತಂಡದಲ್ಲಿ ಸ್ಥಾನ ಪಡೆದರೆ, ಆಫ್ಸ್ಪಿನ್ನರ್ ಕೆ.ಗೌತಮ್ ಭಾರತ ಬಿಹಾಗೂ ಟೆಸ್ಟ್ ಓಪನರ್ ಮಯಾಂಕ್ ಅಗರ್ವಾಲ್ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇವಧರ್ ಟ್ರೋಫಿ ಟೂರ್ನಿ ಅಕ್ಟೋಬರ್ 31ರಿಂದ ನವೆಂಬರ್ 4ರವರೆಗೆ ರಾಂಚಿಯಲ್ಲಿ ನಡೆಯಲಿದೆ.

ಭಾರತ ’: ಹನುಮ ವಿಹಾರಿ(ನಾಯಕ), ದೇವದತ್ ಪಡಿಕ್ಕಲ್, ಅಭಿಮನ್ಯು ಈಶ್ವರನ್, ವಿಷ್ಣು ವಿನೋದ್, ಅಮನ್ದೀಪ್ ಖರೆ, ಅಭಿಷೇಕ್ ರಾಮನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶಹಬಾದ್ ಅಹ್ಮದ್, ರವಿ ಬಿಷ್ಣೋಯ್, ರವಿಚಂದ್ರನ್ ಅಶ್ವಿನ್, ಜೈದೇವ್ ಉನಾದ್ಕಟ್, ಸಂದೀಪ್ ವಾರಿಯರ್, ಸಿದ್ಧಾರ್ಥ್ ಕೌಲ್, ಭಾರ್ಗವ್ ಮೆರಾಯ್.

 ಭಾರತ ಬಿ’: ಪಾರ್ಥಿವ್ ಪಟೇಲ್(ನಾಯಕ, ವಿಕೆಟ್ ಕೀಪರ್), ಪ್ರಿಯಾಂಕ್ ಪಾಂಚಾಲ್, ಯಶಸ್ವಿ ಜೈಸ್ವಾಲ್, ಬಾಬಾ ಅಪರಾಜಿತ್, ಕೇದಾರ್ ಜಾಧವ್, ಋತುರಾಜ್ ಗಾಯಕ್ವಾಡ್, ಶಹಬಾಜ್ ನದೀಮ್, ಅನುಕುಲ್ ರಾಯ್, ಕೆ.ಗೌತಮ್, ವಿಜಯ್ ಶಂಕರ್, ಮೊಹಮ್ಮದ್ ಸಿರಾಜ್, ರುಶ್ ಕಲಾರಿಯ, ಯಾರ ಪೃಥ್ವಿರಾಜ್, ನಿತೀಶ್ ರಾಣಾ.

 ಭಾರತ ಸಿ’: ಶುಭಮನ್ ಗಿಲ್(ನಾಯಕ), ಮಯಾಂಕ್ ಅಗರ್ವಾಲ್, ಅನ್ಮೋಲ್ಪ್ರೀತ್ ಸಿಂಗ್, ಸೂರ್ಯಕುಮಾರ್ ಯಾದವ್, ಪ್ರಿಯಾಮ್ ಗಾರ್ಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಮಯಾಂಕ್ ಮಾರ್ಕಂಡೆ, ಜಲಜ್ ಸಕ್ಸೇನ, ಆವೇಶ್ ಖಾನ್, ಧವಳ್ ಕುಲಕರ್ಣಿ, ಇಶಾನ್ ಪೊರೆಲ್, ಡಿ.ಜಿ ಪಥಾನಿಯಾ, ವಿರಾಟ್ ಸಿಂಗ್.

LEAVE A REPLY

Please enter your comment!
Please enter your name here

4 × 1 =