ಟೀಮ್ ಇಂಡಿಯಾ ಆಟಗಾರರಿಗೆ ಧೋನಿ ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿ..!

0

ರಾಂಚಿ, ಮಾರ್ಚ್ 7: ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್ ಧೋನಿ ಬುಧವಾರ ರಾತ್ರಿ ಡಿನ್ನರ್ ಪಾರ್ಟಿ ಆಯೋಜಿಸಿದ್ದರು.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ 3ನೇ ಪಂದ್ಯ ಧೋನಿ ತವರೂರು ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ. ನಾಗ್ಪುರದಲ್ಲಿ ಮಂಗಳವಾರ ನಡೆದ 2ನೇ ಪಂದ್ಯವನ್ನು ಗೆದ್ದ ಟೀಮ್ ಇಂಡಿಯಾ ಬುಧವಾರ ರಾಂಚಿಗೆ ಆಗಮಿಸಿತ್ತು.

ಬುಧವಾರ ರಾತ್ರಿ ಭಾರತ ತಂಡದ ಎಲ್ಲಾ ಆಟಗಾರರನ್ನು ಮತ್ತು ಸಹಾಯಕ ಸಿಬ್ಬಂದಿಯನ್ನು ಮನೆಗೆ ಆಹ್ವಾನಿಸಿದ್ದ ಧೋನಿ ಗ್ರ್ಯಾಂಡ್ ಪಾರ್ಟಿ ಕೊಟ್ಟಿದ್ದಾರೆ.

ಶುಕ್ರವಾರ ನಡೆಯಲಿರುವ ಪಂದ್ಯ ರಾಂಚಿಯಲ್ಲಿ ಧೋನಿ ಅವರಿಗೆ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆಯಿದೆ. ಇಂಗ್ಲೆಂಡ್ ನಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಘೋಷಿಸುವ ಸಾಧ್ಯತೆಗಳು ದಟ್ಟವಾಗಿವೆ.

LEAVE A REPLY

Please enter your comment!
Please enter your name here

fifteen − 4 =