ಧೋನಿಯನ್ನು ಮೈದಾನದಲ್ಲೇ ಅಟ್ಟಿಸಿಕೊಂಡು ಹೋದ ಅಭಿಮಾನಿ.. ಧೋನಿ ಮಾಡಿದ್ದೇನು ಗೊತ್ತಾ..?

0

ನಾಗ್ಪುರ, ಮಾರ್ಚ್ 5: ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಭಾರತ ತಂಡದ ಆಟಗಾರರು ಫೀಲ್ಡಿಂಗ್ ನಡೆಸಲು ಮೈದಾನಕ್ಕೆ ನಡೆದುಕೊಂಡು ಬರುತ್ತಿದ್ದಾಗ ಧೋನಿ ಅವರ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ. ತಮ್ಮ ಕಾಲಿಗೆರಗಲು ಯತ್ನಿಸಿದ ಅಭಿಮಾನಿಯಿಂದ ತಪ್ಪಿಸಿಕೊಂಡ ಧೋನಿ ಮೈದಾನದ ತುಂಬೆಲ್ಲಾ ಓಡಿದರು.

ಸಹ ಆಟಗಾರರ ಹಿಂದೆ ಬಚ್ಚಿಟ್ಟುಕೊಂಡು ತಮ್ಮ ಅಭಿಮಾನಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ನಂತರ ಪಿಚ್ ಕಡೆ ಓಡಿ ಸ್ಟಂಪ್ಸ್ ಬಳಿ ನಿಂತರು. ಅಲ್ಲಿಗೂ ಬಂದ ಅಭಿಮಾನಿ ಧೋನಿ ಅವರ ಕಾಲಿಗೆರಗಿ ಧೋನಿ ಅವರನ್ನು ತಬ್ಬಿಕೊಂಡು ಅಭಿಮಾನ ಮೆರೆದರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

LEAVE A REPLY

Please enter your comment!
Please enter your name here

one × 2 =