ಚಿನ್ನಸ್ವಾಮಿ ಮೈದಾನದ ಗ್ರೌಂಡ್ಸ್‌ಮನ್‌ಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಧೋನಿ..!

0

ಟೀಮ್ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಆಟದಿಂದ ಅಷ್ಟೇ ಅಲ್ಲ, ಸರಳ ವ್ಯಕ್ತಿತ್ವಕ್ಕೂ ಹೆಸರಾದವರು. ಇದೀಗ ಧೋನಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಗ್ರೌಂಡ್ಸ್ ಮನ್ ಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದಾರೆ.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2ನೇ ಟಿ20 ಪಂದ್ಯ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ಮಂಗಳವಾರ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ನಡೆಸಿತು. ಈ ಸಂದರ್ಭದಲ್ಲಿ ಧೋನಿ ಬಳಿ ತೆರಳಿದ ಕ್ರೀಡಾಂಗಣದ ಸಿಬ್ಬಂದಿಗಳು ಫೋಟೋಗಾಗಿ ಮನವಿ ಮಾಡಿದರು. ಯಾವ ಹಮ್ಮು-ಬಿಮ್ಮು ತೋರದ ಧೋನಿ, ಗ್ರೌಂಡ್ಸ್ ಮನ್ ಗಳೊಂದಿಗೆ ಫೋಟೋಗೆ ಪೋಸ್ ಕೊಟ್ಟರು.

LEAVE A REPLY

Please enter your comment!
Please enter your name here

one × five =