ನಮಗೆ ಧೋನಿ ‘ದೊಡ್ಡಣ್ಣ’ ಅಂದ್ರು ರಾಹುಲ್… ಇಲ್ಲಿದೆ ವೀಡಿಯೊ..!

0

ಬೆಂಗಳೂರು, ಮಾರ್ಚ್ 8: ಭಾರತ ಕ್ರಿಕೆಟ್ ತಂಡದ ಆಟಗಾರರ ಪಾಲಿಗೆ ಮಹೇಂದ್ರ ಸಿಂಗ್ ಧೋನಿ ಹಿರಿಯಣ್ಣನಿದ್ದಂತೆ. ಇದನ್ನು ಹಲವಾರು ಆಟಗಾರರು ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ. ಇದೀಗ ಕರ್ನಾಟಕದ ಸ್ಟೈಲಿಶ್ ಆಟಗಾರ ಕೆ.ಎಲ್ ಕೂಡ ಅದೇ ಮಾತುಗಳನ್ನಾಡಿದ್ದಾರೆ.

ರಾಂಚಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೈ ಏಕದಿನ ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ಗುರುವಾರ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಅಭ್ಯಾಸ ನಡೆಸಿತು. ಈ ಸಂದರ್ಭದಲ್ಲಿ ಬಿಸಿಸಿಐ.ಟಿವಿ ವೆಬ್ ಸೈಟ್ ಗೆ ಮಾತನಾಡಿದ ರಾಹುಲ್ ‘’ನಮಗೆ ಏನೇ ಗೊಂದಲಗಳಿದ್ದರೂ ನಾವು ಮೊದಲು ಹೋಗುವುದು ಧೋನಿ ಬಳಿಗೆ. ಕ್ರಿಕೆಟ್ ಇರಲಿ, ವೈಯಕ್ತಿಕ ಸಮಸ್ಯೆಗಳಿರಲಿ, ಅವೆಲ್ಲವನ್ನೂ ಧೋನಿ ಅವರ ಬಳಿ ಹೇಳಿಕೊಳ್ಳುತ್ತೇವೆ. ತಂಡದ ಎಲ್ಲಾ ಆಟಗಾರರಿಗೂ ಧೋನಿ ಒಂಥರಾ ಹಿರಿಯಣ್ಣನಿದ್ದಂತೆ’’ ಎಂದು ಹೇಳಿದ್ದಾರೆ. 

http://www.bcci.tv/videos/id/7537/the-ms-dhoni-aura-in-ranchi

LEAVE A REPLY

Please enter your comment!
Please enter your name here

four × 5 =