ತಮ್ಮ ಹೆಸರಿನ ಪೆವಿಲಿಯನ್ ಉದ್ಘಾಟಿಸಲು ನಿರಾಕರಿಸಿದ ಧೋನಿ.. ಕಾರಣ ಇಂಟ್ರೆಸ್ಟಿಂಗ್..!

0

ರಾಂಚಿ, ಮಾರ್ಚ್ 7: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 3ನೇ ಏಕದಿನ ಪಂದ್ಯಕ್ಕೆ ಧೋನಿ ತವರೂರು ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಪಂದ್ಯ ಶುಕ್ರವಾರ ನಡೆಯಲಿದೆ.

ಭಾರತ ತಂಡಕ್ಕೆ ಧೋನಿ ಅವರ ಮಹಾನ್ ಕೊಡುಗೆಗಳಿಗಾಗಿ ಕ್ರೀಡಾಂಗಣದ ಪೆವಿಲಿಯನ್ ಗೆ ಧೋನಿ ಅವರ ಹೆಸರಿಡಲಾಗಿದೆ. ಇದನ್ನು ಬುಧವಾರ ಧೋನಿ ಉದ್ಘಾಟಿಸಬೇಕಿತ್ತು. ಆದರೆ ತಮ್ಮ ಹೆಸರಿನ ಪೆವಿಲಿಯನ್ ಉದ್ಘಾಟಿಸಲು ಧೋನಿ ನಿರಾಕರಿಸಿದ್ದಾರೆ. ಇದಕ್ಕೆ ಧೋನಿ ಕೊಟ್ಟ ಕಾರಣ ಇಂಟ್ರೆಸ್ಟಿಂಗ್.

‘’ನಮ್ಮ ಮನೆಯಲ್ಲಿ ನಾನೇನು ಉದ್ಘಾಟನೆ ಮಾಡಲಿ. ಇದೆಲ್ಲಾ ಸರಿಯಲ್ಲ’’ ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳಿಗೆ ಹೇಳುವ ಮೂಲಕ ಧೋನಿ ಸರಳತೆ ಮೆರೆದಿದ್ದಾರೆ. 


LEAVE A REPLY

Please enter your comment!
Please enter your name here

four × five =