ಬಿಸಿಸಿಐ ICA ಚುನಾವಣೆ: ರಣಜಿ ಲೆಜೆಂಡ್ ದೊಡ್ಡ ಗಣೇಶ್ ಸ್ಪರ್ಧೆ

0

ಬೆಂಗಳೂರು, ಅಕ್ಟೋಬರ್ 5: ಟೆಸ್ಟ್ ಕ್ರಿಕೆಟಿಗ ಹಾಗೂ ಕರ್ನಾಟಕದ ರಣಜಿ ಹೀರೊ ದೊಡ್ಡ ಗಣೇಶ್, ಬಿಸಿಸಿಐನ ಭಾರತದ ಆಟಗಾರರ ಸಂಘಟನೆ(ಐಸಿಎ) ಪ್ರತಿನಿಧಿಗಳ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಳಾ ವಿಭಾಗದಲ್ಲಿ ಭಾರತ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಸ್ಪರ್ಧಿಸಲಿದ್ದಾರೆ.

ಭಾರತ ಪರ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರರು ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ದೊಡ್ಡ ಗಣೇಶ್, ಅನ್ಷುಮಾನ್ ಗಾಯಕ್ವಾಡ್, ಕೀರ್ತಿ ಆಜಾದ್ ಮತ್ತು ರಾಕೇಶ್ ಧ್ರುವ್ ಅವರ ಹೆಸರು ಅಂತಿಮವಾಗಿದ್ದು, ಇವರಲ್ಲಿ ಒಬ್ಬರು ಬಿಸಿಸಿಐನ ಐಸಿಎಗೆ ಆಯ್ಕೆಯಾಗಲಿದ್ದಾರೆ. 46 ವರ್ಷದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಸದ್ಯ ಗೋವಾ ತಂಡದ ಕೋಚ್ ಆಗಿದ್ದು, ಭಾರತ ಪರ 4 ಟೆಸ್ಟ್ ಹಾಗೂ 1 ಏಕದಿನ ಪಂದ್ಯವಾಡಿದ್ದಾರೆ. ಒಟ್ಟು 104 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಗಣೇಶ್ 364 ವಿಕೆಟ್ ಪಡೆದಿದ್ದಾರೆ.

ಮಹಿಳಾ ವಿಭಾಗದಲ್ಲಿ ಶಾಂತಾ ರಂಗಸ್ವಾಮಿ, ಸಿಟಿಎಸ್ ಸುಗುಣ, ಮೌನ ಎಸ್. ಮತ್ತು ಅಮೃತಾ ಶಿಂಧೆ ಸ್ಪರ್ಧೆಯಲ್ಲಿದ್ದಾರೆ. ಐಎಸಿ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಸ್ಥಾನಗಳಿಗೆ ಅಕ್ಟೋಬರ್ 11ರಿಂದ 13ರವರೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

 

LEAVE A REPLY

Please enter your comment!
Please enter your name here

1 + 5 =